ಶಿರಸಿ: ಬನವಾಸಿ ಹೋಬಳಿಯ ಹೆಬ್ಬತ್ತಿ ಗ್ರಾಮದ ಶ್ರೀಕಲ್ಮೇಶ್ವರ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ಶಿಲಾಮಯ ದೇವಾಲಯ ಅರ್ಪಣಾ ಕಾರ್ಯಕ್ರಮ ನೆರವೇರಿತು.
ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಮಲ್ಲಸರ್ಜನ ಪಾಟೀಲ್ ಮಾತನಾಡಿ, ದೇವಸ್ಥಾನವು ನಿಗದಿತ ಅವಧಿಯಲ್ಲಿ ನಾವು ಅಂದುಕೊoಡoತೆ ನಿರ್ಮಾಣಗೊಳ್ಳಲು ಸಚಿವ ಶಿವರಾಮ್ ಹೆಬ್ಬಾರ್ ಅವರ ಕೊಡುಗೆ ಮತ್ತು ಸಹಕಾರ ಬಹುದೊಡ್ಡದು. ಪೂರ್ವ ನಿಯೋಜಿತ ಸರಕಾರದ ಕೆಲಸದ ಒತ್ತಡದಲ್ಲೂ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದುಕೊಂಡು ಮತ್ತಷ್ಟು ಸಹಕಾರ ನೀಡುವ ಭರವಸೆ ನೀಡಿದ್ದು, ಭಗವಂತ ಅವರಿಗೆ ಆಯುರಾರೋಗ್ಯ ನೀಡಲಿ ಎಂದರು.
ಧರ್ಮಸಭೆಯಲ್ಲಿ ಮಹಾಂತ ಮಹಾಸ್ವಾಮಿಗಳು, ಶಾಂತಪುರ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ದೇವಸ್ಥಾನ ಟ್ರಸ್ಟ್ ಪದಾಧಿಕಾರಿಗಳು, ಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಮಂಗಲಾ ನಾಯ್ಕ್, ಅಂಡಗಿ ಪಂಚಾಯತ್ ಉಪಾಧ್ಯಕ್ಷ ಸಿದ್ದನಗೌಡ್ರು, ಪಂಚಾಯತ್ ಸದಸ್ಯರಾದ ಮಂಜುನಾಥ್ ನಾಯ್ಕ್, ಭದ್ರು ಗೌಡ್ರು, ಬಾಬು ನಾಯ್ಕ್, ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ನಿರ್ದೇಶಕ ಹಾಗೂ ಗ್ರಾಮದ ಹಿರಿಯ ಆರ್.ಕೆ.ನಾಯ್ಕ್, ದೇವರಾಜ್ ನಾಯ್ಕ್, ವಿನಾಯಕ ನಾಯ್ಕ್, ರಾಘವೇಂದ್ರ ಗಾಣಿಗ ಹಾಗೂ ಅಪಾರ ಭಕ್ತ ಸಮೂಹ ಭಾಗಿಯಾಗಿತ್ತು.