• first
  Slide
  Slide
  previous arrow
  next arrow
 • ಜೀವನ ಶಿಕ್ಷಣಕ್ಕೆ ಸಹಪಠ್ಯ ಚಟುವಟಿಕೆ ಬಹುಮುಖ್ಯ: ಡಾ.ಶ್ರೀಪಾದ ಶೆಟ್ಟಿ

  300x250 AD

  ಹೊನ್ನಾವರ: ಕಾಲೇಜು ಜೀವನ ಶಿಕ್ಷಣದ ಜೊತೆ ಜೀವನ ಶಿಕ್ಷಣ ನೀಡಲು ಸಹಪಠ್ಯ ಚಟುವಟಿಕೆ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ನಿವೃತ್ತ ಉಪನ್ಯಾಸಕ ಹಾಗೂ ಸಾಹಿತಿ ಡಾ.ಶ್ರೀಪಾದ ಶೆಟ್ಟಿ ಅಭಿಪ್ರಾಯಪಟ್ಟರು.
  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ, ಕ್ರೀಡೆ, ಎನ್.ಸಿ.ಸಿ, ಎನ್‌ಎಸ್‌ಎಸ್, ರೇಂಜರ್ಸ್ ಹಾಗೂ ರೆಡ್‌ಕ್ರಾಸ್ ಘಟಕದ ಉದ್ಘಾಟನೆ ನೇರವೇರಿಸಿ ಮಾತನಾಡಿದ ಅವರು, ಪುಸ್ತಕ ಓದುವದರಿಂದ ಬದುಕನ್ನು ಬೆಳಸಲಿದೆ. ಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಿ. ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ವಿದ್ಯಾರ್ಥಿಗಳು ಇರುವ ಸೌಲಭ್ಯ ಬಳಸಿಕೊಂಡು ಸಾಧನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
  ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಎಂ.ಎಸ್.ಹೆಗಡೆ ಕಣ್ಣಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದೆ. ಜ್ಞಾನವೃದ್ಧಿಯ ಜೊತೆಗೆ ಸುತ್ತಮುತ್ತಲಿನ ಪರಿಸರದ ಬಗ್ಗೆ ಮಾಹಿತಿ ಅರಿಯಲು ಸಹಕಾರಿಯಾಗಲಿದೆ ಎಂದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ನಾಗೇಶ ಶೆಟ್ಟಿ ಮಾತನಾಡಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಸಹಪಠ್ಯ ಚಟುವಟಿಕೆ ಸಾಧನೆ ಮಾಡಲು ಸಹಕಾರವನ್ನು ನೀಡಲು ಉಪನ್ಯಾಸಕವೃಂದ ಸಜ್ಜಾಗಿದೆ. ಇಲ್ಲಿಯ ಅವಕಾಶವನ್ನು ಪ್ರತಿ ವಿದ್ಯಾರ್ಥಿ ಸಾಧನೆ ಮಾಡುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಬೇಕಿದೆ ಎಂದರು.
  ಉಪನ್ಯಾಸಕಿ ಅಂಬುಜಾಕ್ಷಿ ಸ್ವಾಗತಿಸಿ, ಪ್ರೊ.ಜಿನತ್ ವಂದಿಸಿದರು. ಕಾವ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಸುರೇಶ ಶೆಟ್ಟಿ, ಉಪನ್ಯಾಸಕರಾದ ಡಾ.ಮೇಘನಾ ಡಾ.ಶ್ರೀನಿವಾಸ, ಡಾ.ಶ್ವೇತಾ, ಪ್ರೊ.ಭಾಸ್ಕರ, ಮಹಾಂತೇಶ ಹೊಸಮನಿ, ಪ್ರೊ.ರಶ್ಮಿ, ಪ್ರೊ.ಸುಜಾತ, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top