ಶಿರಸಿ : ತಾಲೂಕಿನ ಅಜ್ಜೀಬಳ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಅಜ್ಜೀಬಳ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಜ.22 ರಂದು ಸಂಘದ ಆವರಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಅಜ್ಜೀಬಳ ಸೊಸೈಟಿಯಲ್ಲಿ ಮಂಗಳವಾರ ಸಂಘದ ಅಧ್ಯಕ್ಷ ಮಂಜುನಾಥ ಭಟ್ಟ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 1019ರಲ್ಲಿ ಸಂಸ್ಥೆ ಸ್ಥಾಪನೆಯಾಗಿದೆ. ಈಗಾಗಲೇ ಶತಮಾನೋತ್ಸವ ಸಂಭ್ರಮ ಆಚರಿಸಬೇಕಿತ್ತು. ಆದರೆ ಕೊರೊನಾ ಕಾರಣದಿಂದ 2 ವರ್ಷ ಮುಂದೂಡಲಾಗಿದೆ. ಉತ್ತಮವಾಗಿ ಸಂಸ್ಥೆ ನಡೆಯುತ್ತಿದ್ದು, ಈ ಬಾರಿ ಸಂಭ್ರಮವಾಗಿ ಶತಮಾನೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದರು.
ಉದ್ಘಾಟನೆ : ಅಂದು ಬೆಳಿಗ್ಗೆ 10.30 ಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ನೂರರ ಸಂಭ್ರಮ ಸ್ಮರಣ ಸಂಚಿಕೆಯನ್ನು ಸಚಿವ ಶಿವರಾಮ ಹೆಬ್ಬಾರ್ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಎಪಿಎಮ್ಸಿ ಅಧ್ಯಕ್ಷ ಪ್ರಶಾಂತ ಗೌಡ್ರು, ಎಪಿಎಮ್ಸಿ ಸದಸ್ಯೆ ವಿಮಲಾ ಹೆಗಡೆ, ಕಾನಗೋಡ ಗ್ರಾಪಂ ಅಧ್ಯಕ್ಷೆ ಗೀತಾ ಪೂಜಾರಿ, ಕಾನಗೋಡ ಗ್ರಾಪಂ ಉಪಾಧ್ಯಕ್ಷ ಪ್ರಶಾಂತ ಹೆಗಡೆ, ಸಹಕಾರಿ ಸಂಘದ ಕಾರವಾರ ಉಪನಿಬಂಧಕ ಮಂಜುನಾಥ ಆರ್., ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ ಆಗಮಿಸಲಿದ್ದು, ಸಂಘದ ಅಧ್ಯಕ್ಷ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಮಾರೋಪ ಸಮಾರಂಭ ಮಧ್ಯಾಹ್ನ 3 ಗಂಟೆಯಿಂದ ನಡೆಯಲಿದ್ದು, ಈವರೆಗೆ ಸೇವೆ ಸಲ್ಲಿಸಿದ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಸನ್ಮಾನ ಮಾಡಲಿದ್ದೇವೆ. ಅಂದು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಜಿ.ಎಮ್.ಹೆಗಡೆ ಹುಳಗೋಳ, ಜಿ.ಟಿ.ಹೆಗಡೆ ತಟ್ಟೀಸರ, ಆರ್.ಎಮ್.ಹೆಗಡೆ ಬಾಳೇಸರ, ಶಂಭುಲಿಂಗ ಹೆಗಡೆ ನಿಡಗೋಡ ಹಾಗೂ ಟಿಎಸ್ಎಸ್ ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಹೆಗಡೆಕಟ್ಟಾ ಸೊಸೈಟಿ ಅಧ್ಯಕ್ಷ ಎಮ್.ಪಿ.ಹೆಗಡೆ , ಎಮ್.ಇ.ಎಸ್. ಸಂಸ್ಥೆ ಅಧ್ಯಕ್ಷ ಜಿ.ಎಮ್.ಹೆಗಡೆ ಭಾಗವಹಿಸಲಿದ್ದು, ಸಂಘದ ಅಧ್ಯಕ್ಷ ಮಂಜುನಾಥ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಾಯಂಕಾಲ ೫ ಗಂಟೆಯಿಂದ ನೈದಿಲೆ ಹೆಗಡೆ, ವಿಜಯೇಂದ್ರ ಹೆಗಡೆ, ಭರತ್ ಹೆಗಡೆ ತಂಡದಿಂದ ಭಕ್ತಿ – ಭಾವ ಲಹರಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಂತರ ಸ್ಥಳೀಯ ಕಲಾವಿದರಿಂದ ಗಾಯನ ಹಾಗೂ ನೃತ್ಯ ಇದ್ದು, ರಾತ್ರಿ 8 ರಿಂದ ಪೆರ್ಡೂರು ಮೇಳದಿಂದ ಸಮಗ್ರ ಕಂಸ ಯಕ್ಷಗಾನ ನಡೆಯಲಿದೆ ಎಂದು ತಿಳಿಸಿದರು.
ಈ ವೇಳೆ ಪ್ರಮುಖರಾದ ಎಮ್.ಪಿ.ನಾಯ್ಕ, ಎಸ್.ಎಸ್.ಹೆಗಡೆ , ರವೀಂದ್ರ ಹೆಗಡೆ, ವಿಶ್ವನಾಥ ಹೆಗಡೆ, ಜಿ.ಎಲ್.ಗೌಡ್ರು, ಸುಮಾ ಹೆಗಡೆ, ಲಕ್ಷ್ಮೀ ಕೊರುರು, ಬಂಗಾರಿ ಹರಿಜನ ಮುಂತಾದವರು ಇದ್ದರು.
ಸಂಘವು 12 ಲಕ್ಷ ಲಾಭದಲ್ಲಿದೆ. ಸಂಘದ ಸದಸ್ಯರಿಗಾಗಿ ಅನೇಕ ಅನುಕೂಲ ಮಾಡಿಕೊಡಲಾಗಿದೆ. ಬೆಳೆ ಸಾಲ ಹೊರತು ಪಡಿಸಿ ಉಳಿದ ಸಾಲವನ್ನು ನಮ್ಮ ಹಣದಲ್ಲೇ ನೀಡಲಾಗುತ್ತದೆ. ಸಂಘದ ಇನ್ನಷ್ಟು ಅಭಿವೃದ್ಧಿ ನಮ್ಮ ಗುರಿಯಾಗಿದೆ. — ಮಂಜುನಾಥ ಭಟ್ ಬಿಸ್ಲಕೊಪ್ಪ, ಅಧ್ಯಕ್ಷ