ಹೊನ್ನಾವರ: ತಾಲೂಕಿನ ಸಂತೆಗುಳಿ ಮೈದಾನದಲ್ಲಿ ಮಂಕಿಯ ರಾಮಕ್ಷತ್ರಿಯ ಯೂತ್ಸ್ ಸ್ಪೋರ್ಟ್ಸ್ ಹಾಗೂ ಕ್ಷತ್ರಿಯ ಸ್ಪೋರ್ಟ್ಸ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ರಾಮಕ್ಷತ್ರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.
ನಂತರ ಮಾತನಾಡಿ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಡವಾಗಲು ಸಾಧ್ಯ. ಯುವಕರು ಮನೊರಂಜನೆಯ ಜೊತೆಗೆ ಸಂಘಟಿತರಾಗಲು ಕ್ರೀಡೆ ಬಹುಮುಖ್ಯವಾಗಿದೆ. ವಿಶಾಲ ಮೈದಾನದಲ್ಲಿ ನಡೆಯುವ ಕ್ರಿಕೇಟ್ ಪಂದ್ಯಾವಳಿ ಯಶ್ವಸಿಯಾಗಲಿ ಎಂದು ಶುಭ ಹಾರೈಸಿದರು.
ಹೊಸಾಕುಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕಿರಣ್ ಹೆಗಡೆ ಹಾಗೂ ಸಾಲ್ಕೋಡ್ ಪಂಚಾಯತಿ ಸದಸ್ಯ ಗಣಪತಿ ಭಟ್, ಯುವ ಮುಖಂಡ ಅಮಿತ್ ನಾಯ್ಕ, ಚಂದಾವರ ಗ್ರಾ.ಪಂ. ಸದಸ್ಯರಾದ ಪ್ರೇಮಾ ನಾಯ್ಕ ಹಾಗೂ ಅಣ್ಣಪ್ಪ ನಾಯ್ಕ, ಪ್ರಮುಖರಾದ ಎಮ್.ಎಸ್.ನಾಯ್ಕ, ಮೋಹನ ನಾಯ್ಕ ಮತ್ತಿತರರು ಇದ್ದರು.