ಶಿರಸಿ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಡೆಸಿದ 2022-23 ನೇ ಸಾಲಿನ ಇನ್ಸ್ಪೈರ್ ಪುರಸ್ಕಾರ ಸ್ಪರ್ಧೆಯಲ್ಲಿ ಶಿರಸಿ ಲಯನ್ಸ್ ಪ್ರಾಥಮಿಕ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಕುಮಾರ ಪ್ರಮಥ ಎಮ್. ಎಚ್ INNOVATIVE FOLDABLE FAN ಎಂಬ ವಿಷಯದ ಮೇಲೆ ತಯಾರಿಸಿದ ಮಾದರಿ ಆಯ್ಕೆಯಾಗಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ನವೀನ ಸಂಶೋಧನೆಗಳಿಗೆ ಮೀಸಲಾದ ಪುರಸ್ಕಾರಕ್ಕೆ ಶಿರಸಿ ಲಯನ್ಸ್ ಶಾಲೆಯ ವಿದ್ಯಾರ್ಥಿ ಆಯ್ಕೆಯಾಗಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದ್ದು ಈ ವಿದ್ಯಾರ್ಥಿಗೆ ಶಾಲೆಯ ಸಹಶಿಕ್ಷಕರಾದ ಸಚಿನ್ ಕೊಡಿಯಾ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ಬಾಂಧವರು, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.