Slide
Slide
Slide
previous arrow
next arrow

ಚದುರಂಗ ಮುಕ್ತ ಪಂದ್ಯಾವಳಿ ಯಶಸ್ವಿ

300x250 AD

ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಭಟ್ ಚದುರಂಗ ಶಾಲಾ ಆಶ್ರಯದಲ್ಲಿ ಜ. 08, ಭಾನುವಾರದಂದು ಹೊಟೆಲ್ ಸಾಮ್ರಾಟದಲ್ಲಿ ನಡೆದ ಚದುರಂಗ ಮುಕ್ತ ಪಂದ್ಯಾವಳಿಯು ಯಶಸ್ವಿಯಾಗಿ ನಡೆಯಿತು.ಪಂದ್ಯಾವಳಿಯಲ್ಲಿ ಒಟ್ಟೂ 149 ಆಟಗಾರರು ಭಾಗವಹಿಸಿದ್ದರು. ಮುಖ್ಯ ತೀರ್ಪುಗಾರ ಕೆ.ವಿ. ಶ್ರೀಪಾದ ವಿಜೇತರ ಪಟ್ಟಿಯನ್ನು ಪ್ರಕಟಿಸಿದರು.

ಪ್ರಥಮ ಸ್ಥಾನವನ್ನು ಪ್ರೀತಮ್ ಆರ್. ಶರ್ಮ ರೂ.12,500/- ನಗದು ಮತ್ತು ಟ್ರೋಫಿ, ದ್ವಿತೀಯ ಸ್ಥಾನವನ್ನು ಪ್ರಶಾಂತ್ ಜೆ. ನಾಯಕ್ ರೂ. 10,000/- ಮತ್ತು ಟ್ರೋಫಿ, ತೃತೀಯ ಸ್ಥಾನವನ್ನು ಆಗಸ್ಟಿನ್ ಎ. ರೂ. 7,500/- ಮತ್ತು ಟ್ರೋಫಿಗಳನ್ನು ಹಂಚಿಕೊಂಡರು. ನಾಲ್ಕರಿಂದ 20 ನೇಯ ಸ್ಥಾನವನ್ನು ಚಿರಾಂತ್ ಎಮ್. ಡಿ, ವರ್ಧನ ಎಮ್. ಹೆಗಡೆ, ಸುಮೀತ್‌ಕುಮಾರ್ ಎಮ್.ಎಸ್., ಸಮರ್ಥ ಜೆ. ರಾವ್, ಮನಸ್ವಿನಿ ಆರ್, ಗೌತಮ ಜೆ. ಕೆ., ವಿಜಯಕುಮಾರ್ ಸಿ. ಹಲ್ಲುರ್, ವಿನಯಕುಮಾರ್ ಎಸ್. ಹಿರೇಮಠ, ನವೀನ ಶ್ರೀ. ಹೆಗಡೆ, ಹರ್ಮನ್ ಡಿ. ಎಸ್., ಮಂಜುನಾಥ ಡಿ. ನಾಯ್ಕ, ನಿತೀಶ್ ಭಟ್, ಮಹಾಲಿಂಗಪ್ಪ ಎನ್. ಸಿ, ಪ್ರಸನ್ನ ಹೆಗಡೆ, ಸಿರ್ಸಾಟ್ ಶೇಖರ ವಿ, ಚಿನ್ಮಯ ವಿ. ಭಟ್, ಕೃಷ್ಣ ವಿ. ಶಿಂಧೆ ಇವರುಗಳು ರೂ. 35,500/- ದೊಂದಿಗೆ ಕ್ರಮವಾಗಿ ಹಂಚಿಕೊಂಡರು. ಉತ್ತಮ ಮಹಿಳಾ ಆಟಗಾರ್ತಿ ಪ್ರಥಮ ಸ್ಥಾನವನ್ನು ನಾಗಶ್ರೀ ಜೆ. ನಾಯ್ಕ ರೂ. 1,000/- ಮತ್ತು ಟ್ರೋಫಿ, ದ್ವಿತೀಯ ಸಿಮ್ರಾ ನಡಫ್ ರೂ, 500/- ಮತ್ತು ಟ್ರೋಫಿಯೊಂದಿಗೆ ಹಂಚಿಕೊಂಡರು. ಉತ್ತಮ ಹಿರಿಯ ಆಟಗಾರ ಪ್ರಶಸ್ತಿ ಪ್ರಥಮ ಶಾಂತಾರಾಮ ಕೆ. ರೂ. 1,000/- ಮತ್ತು ಟ್ರೋಫಿ, ದ್ವಿತೀಯ ಜೈವಂತ ಹೆಗಡೆ ರೂ. 500/- ಮತ್ತು ಟ್ರೋಫಿಗಳೊಂದಿಗೆ ಹಂಚಿಕೊಂಡರು. ಉತ್ತಮ ಅಂಗವಿಕಲೆ ಪ್ರಶಸ್ತಿಯನ್ನು ಅಂಬಿಕಾ ಮಸ್ಸಗಿ ರೂ. 1,000/- ಮತ್ತು ಟ್ರೋಫಿ ಪಡೆದರು.

8 ವರ್ಷದೊಳಗಿನವರ ವಿಭಾಗದಲ್ಲಿ ತುಳಸಿ ಪ್ರಕಾಶ ವಾಯ್. ಎಸ್.ಪ್ರಥಮ, ರತನ್ ಆರ್. ದ್ವಿತೀಯ, ಲೀಸನ್ ಕರಿಗೌಡರ್ ತೃತೀಯ ಸ್ಥಾನ ಪಡೆದರು. 10 ವರ್ಷದೊಳಗಿನ ವಿಭಾಗದಲ್ಲಿ ಸ್ವದೇಶ ಪ್ರಸಾದ್ ಹೆಗಡೆ ಪ್ರಥಮ, ಅಶ್ವನ್, ಅರುಣ್ ಪಿಂಟೊ ದ್ವಿತೀಯ, ಗೌರವ್ ಕೆ.ಎಂ. ತೃತೀಯ, ದಿಗಂತ ಆರ್. ಮಳಗಿಮನಿ ಚತುರ್ಥ, ಅನೀಶ್ ಪಾಟೀಲ್ ಐದನೇಯ ಸ್ಥಾನವನ್ನು ಕ್ರಮವಾಗಿ ಹಂಚಿಕೊಂಡರು.

300x250 AD

12 ವರ್ಷದೊಳಗಿನ ವಿಭಾಗದಲ್ಲಿ ಅಭಿನೀತ್ ಭಟ್ ಪ್ರಥಮ, ಅಂಗದ ಎಚ್. ಪಿ.ದ್ವಿತೀಯ, ಸಿದ್ದಾರ್ಥ ಎಂ. ಜೋಶಿ ತೃತೀಯ, ವೈಭವ್ ಸಂಗನಬಶೆಟ್ಟ ಚತುರ್ಥ ಹಾಗೂ ಕ್ಷಿತಿಜ್ ಪಿ. ಮಕಪುರ್ ಐದನೇಯ ಸ್ಥಾನಗಳನ್ನು ಕ್ರಮವಾಗಿ ಹಂಚಿಕೊಂಡರು.

14 ವರ್ಷದೊಳಗಿನವರ ವಿಭಾಗದಲ್ಲಿ ಅಮೃತಾ ದೇವರಕೊಂಡಿ ಪ್ರಥಮ, ಪೃಥ್ವಿ ಆರ್. ಕೆಂಚನ ಗೌಡ್ರ ದ್ವಿತೀಯ, ಲೇಖನ್ ಆರ್. ತೃತೀಯ, ರಜತ ವಿನಾಯಕ ಶೇಟ್ ಚತುರ್ಥ ಹಾಗೂ ನಿಶ್ಚಲ್ ಜಿ. ಎಸ್.ಐದನೇಯ ಸ್ಥಾನಗಳನ್ನು ಕ್ರಮವಾಗಿ ಹಂಚಿಕೊಂಡರು.
16 ವರ್ಷದೊಳಗಿನ ವಿಭಾಗದಲ್ಲಿ ಭುವನ ಭಟ್ ಪ್ರಥಮ, ಅಖಿಲೇಶ್ ಹರ್ಷ ಕಾಮತ್ ದ್ವಿತೀಯ, ಕಿಶನ್‌ಕುಮಾರ್ ಎನ್. ಎನ್. ತೃತೀಯ, ಆಕಾಶ್ ಕುಲಕರ್ಣಿ ಚತುರ್ಥ ಹಾಗೂ ಸ್ವಯಂ ಎಂ.ಎಸ್.ಐದನೇಯ ಸ್ಥಾನಗಳನ್ನು ಕ್ರಮವಾಗಿ ಹಂಚಿಕೊಂಡರು. ಅನ್ವಯ ಹೆಗಡೆ ಪಂದ್ಯಾವಳಿಯ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನವೀನ ಶ್ರೀ. ಹೆಗಡೆ ಹಾಗೂ ರಾಮಚಂದ್ರ ಭಟ್ ಪಂದ್ಯಾವಳಿಗೆ ಆಯೋಜಕರಾಗಿ ಕಾರ್ಯ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top