Slide
Slide
Slide
previous arrow
next arrow

ಉತ್ತರ ಕನ್ನಡ ಗುಡ್ಡಗಾಡು ಜಿಲ್ಲೆ: 500 ಕಾಲುಸಂಕ ಮಂಜೂರಿ ಘೋಷಣೆಗೆ ಒತ್ತಾಯ

300x250 AD

ಶಿರಸಿ: ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಸಂಪರ್ಕಕ್ಕೆ ಕನಿಷ್ಟ 500 ಕಾಲುಸಂಕ ಮಂಜೂರಿಯ ಘೋಷಣೆಯನ್ನು ಜನವರಿ 15ರಂದು ಶಿರಸಿಗೆ ಆಗಮಿಸುತ್ತಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಡಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಭೌಗೋಳಿಕವಾಗಿ 10571 ಚ.ಕೀ.ಮೀ ವ್ಯಾಪ್ತಿಯಲ್ಲಿದ್ದು, ಅವುಗಳಲ್ಲಿ 8500 ಚ.ಕೀ.ಮೀ ಅರಣ್ಯ, ಗುಡ್ಡಗಾಡು, ಹಳ್ಳತಗ್ಗುಗಳಿಂದ ಕೂಡಿದ ಪ್ರದೇಶವಾಗಿದ್ದು ಇರುತ್ತದೆ. ಗ್ರಾಮೀಣ ಭಾಗದಲ್ಲಿ ಸ್ವತಂತ್ರ ದೊರಕಿ 7 ದಶಕಗಳಾದರೂ ಇಂದಿಗೂ ಸಂಪರ್ಕದ ಕೊರತೆ ಕಾಣುತ್ತಿದೆ. ಗುಡ್ಡಗಾಡು ಜನರು ಸಂಪರ್ಕದ ಕೊರತೆಯಿಂದ ಮೂಲಭೂತ ಸೌಕರ್ಯದಿಂದ ವಂಚಿತರಾಗುತ್ತಿರುವುದು ವಿಷಾದಕರ.

ಕಾಲುಸಂಕ ಕೊರತೆಯಿಂದ ಗ್ರಾಮೀಣ ಭಾಗದ ಗುಡ್ಡಗಾಡು ಜನರು ಹಾಗೂ ವಿದ್ಯಾರ್ಥಿಗಳು ದಿನನಿತ್ಯ ಸಂಚಾರದ ಸಮಸ್ಯೆಗಳನ್ನು ಎದುರಿಸುತ್ತಿರುವರು. ಮಳೆಗಾಲದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರಿಂದಲೇ ರಚಿಸಿಕೊಂಡ ತಾತ್ಕಾಲಿಕ ಕಾಲುಸಂಕದ ಮೇಲಿನ ಓಡಾಟ ಅಪಾಯದಿಂದ ಕೂಡಿದ್ದು, ಜಿಲ್ಲೆಗೆ ಮುಂದಿನ ವಾರ ಆಗಮಿಸುತ್ತಿರುವ ಮುಖ್ಯಮಂತ್ರಿಗಳು ಹೆಚ್ಚುವರಿ ಕಾಲುಸಂಕಕ್ಕೆ ಮಂಜೂರಿಗೆ ಆದೇಶಿಸಿ ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡಕ್ಕೆ ವಿಶೇಷ ಕೊಡುಗೆ ನೀಡಬೇಕೆಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.

300x250 AD

ಅತಿ ಹೆಚ್ಚು ಶಿರಸಿ-ಸಿದ್ಧಾಪುರ ಕ್ಷೇತ್ರ:
ಕಾಲುಸಂಕ ಸಮಸ್ಯೆಯಿಂದ ಅತಿಹೆಚ್ಚು ಬೇಡಿಕೆ ಮತ್ತು ಅವಶ್ಯಕತೆ ಜಿಲ್ಲೆಯ ಇನ್ನಿತರ ಕ್ಷೇತ್ರಕ್ಕೆ ತುಲನೆ ಮಾಡಿದಾಗ ಶಿರಸಿ-ಸಿದ್ಧಾಪುರ ಕ್ಷೇತ್ರಕ್ಕೆ ಇರುವುದಾಗಿ ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top