ಶಿರಸಿ: ಬುದ್ಧಿಮಾಂದ್ಯತೆ ಇರುವ ಮಕ್ಕಳ ವಯಸ್ಸು ಆಧರಿಸಿ ಕಲಿಸುವುದು ಕಷ್ಟ ಸಾಧ್ಯ. ವಿಶೇಷ ಮಕ್ಕಳ ಬುದ್ಧಿಶಕ್ತಿ ಪರೀಕ್ಷೆಯನ್ನು ವಿವರವಾಗಿ ನಡೆಸಿದರೆ ಅವರ ಮಟ್ಟ ಅಳೆಯಲು ಸಾಧ್ಯ ಎಂದು ಧಾರವಾಡದ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ಡಿಮ್ಹಾನ್ಸ್) ಪ್ರಾಧ್ಯಾಪಕಿ, ಮನಃಶಾಸ್ತ್ರಜ್ಞೆ ಡಾ.ಗಾಯತ್ರಿ ಹೆಗೆಡೆ ಅಜಿತ ಮನೋಚೇತನ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಬುದ್ಧಿಶಕ್ತಿ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.
ತಾಲೂಕಾ ವೈದ್ಯಾಧಿಕಾರಿ ಡಾ.ವಿನಾಯಕ ಭಟ್ ಶಿಬಿರದಲ್ಲಿ ಪಾಲ್ಗೊಂಡು, ಅಜಿತ ಮನೋಚೇತನಾ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವನ್ನು ಸದ್ಯದಲ್ಲೇ ನಡೆಸಲಿದ್ದೇವೆ ಎಂದು ತಿಳಿಸಿದರು. ಅಂಗವಿಕಲರ ಸೇವಾ ಸೌಲಭ್ಯ ಇಲ್ಲಿನ ಎಲ್ಲ ಮಕ್ಕಳಿಗೆ ಸಿಗುವಂತೆ ಪ್ರಯತ್ನ ನಡೆಸುತ್ತೇವೆ ಎಂದು ಹೇಳಿದರು.
ಸಂಸ್ಥೆಯ ಟ್ರಸ್ಟಿಗಳಾದ ಅನಂತ ಹೆಗಡೆ ಅಶೀಸರ, ವಿ.ಆರ್.ಹೆಗಡೆ ಹೊನ್ನೆಗದ್ದೆ ಶಿಬಿರದ ಉದ್ಘಾಟನೆಯಲ್ಲಿ ಪಾಲ್ಗೊಂಡರು. ಮುಖ್ಯ ಶಿಕ್ಷಕಿ ನರ್ಮದಾ ಸ್ವಾಗತಿಸಿದರು. ಬುದ್ಧಿಶಕ್ತಿ ಪರೀಕ್ಷಾ ಶಿಬಿರದ ನಂತರ ಧಾರವಾಡ ಡಿಮ್ಹಾನ್ಸ್ ತಜ್ಞರ ತಂಡದ ಡಾ.ಗಾಯತ್ರಿ ಹೆಗಡೆ, ಸುಷ್ಮಾ ಸಿ ಮತ್ತು ಅಶ್ವಿನಿ ಪಾಟೀಲ ಅವರು ವಿಕಾಸ ಶಾಲಾ ಶಿಕ್ಷಕಿಯರಾದ ಸುಮಿತ್ರ, ಪರಿಮಳ, ಗೀತಾ, ಶ್ಯಾಮಲಾ ಅವರೊಂದಿಗೆ ತಜ್ಞ ಸಂವಾದ ಹಾಗೂ ಮಾರ್ಗದರ್ಶನ ನೀಡಿದರು.