ಮುಂಡಗೋಡ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಹಾಗೂ ಧಾರವಾಡದ ಟಾಟಾ ಹಿಟಾಚಿ ಕನ್ಸ್ಟ್ರಕ್ಷನ್ ಮಶಿನರಿ ಪ್ರೈ .ಲಿ. ಕಂಪನಿಗಳ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಹುನಗುಂದ ಗ್ರಾಮದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಲಾಯಿತು.
ಟಾಟಾ ಹಿಟಾಚಿ ಕನ್ಸ್ಟ್ರಕ್ಷನ್ ಮಶಿನರಿ ಪ್ರೈ. ಲಿ. ಕಂಪನಿಯ ಸಿಎಸ್‌ಆರ್ ಪ್ಲಾನಿಂಗ್ ಹೆಡ್ ಆಫೀಸರ್ ಪ್ರಶಾಂತ ದೀಕ್ಷಿತ್ ಮಾತನಾಡಿ, ಇಚ್ಛಾಶಕ್ತಿ ಹಿಂದಿದ್ದಲ್ಲಿ ಮಹಿಳೆಯರು ಸಮಾಜದಲ್ಲಿ ಪುರುಷರಿಗೆ ಸಮಾನವಾಗಿ ಬದುಕಬಹುದು. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಪ್ರಭಾವಿ ವ್ಯಕ್ತಿಗಳಾಗಿ ಬದುಕುತ್ತಿದ್ದಾರೆ ಎಂದರು.
ದೇಶಪಾoಡೆ ರುಡ್‌ಸೆಟ್ ಗ್ರಾಮೀಣ ಮಹಿಳೆಯರನ್ನು ಆಯ್ಕೆ ಮಾಡಿ ಸ್ವ ಉದ್ಯೋಗ ತರಬೇತಿ ನೀಡಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ದಾರಿ ಮಾಡಿಕೊಡುತ್ತಿವೆ. ನಾವು ಹಂತ ಹಂತವಾಗಿ ಕೆಲಸವನ್ನು ಮುಂದುವರಿಸುವುದರಿoದ ಜೀವನದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ. ನಮ್ಮ ಕಂಪನಿಯು ಸಾಮಾಜಿಕ ಬದ್ಧತೆಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದು, ಇಂದು ದುಡಿಮೆಯ ಆರಂಭವಾಗಿದೆ. ಇದಕ್ಕೆ ಕೊನೆಯಿಲ್ಲ ಎಂದು ಹೇಳಿ ಎಲ್ಲರೂ ಇದರ ಪ್ರಯೋಜನ ಕೊಳ್ಳಬೇಕು ಎಂದರು.
ಚೇತನ ಸಂಗಡಿಗರು ಪ್ರಾರ್ಥನೆ ಮಾಡಿದರು. ಸನ್ಮತಿ ಅಮರಗೋಳ ಸ್ವಾಗತ, ಅಬೇದಾ ಖಾದ್ರಿ ನಿರೂಪಣೆ ಮಾಡಿದರು. ತರಬೇತಿ ಪಡೆದ ಪುಷ್ಪ ಹೊನ್ನಳ್ಳಿ, ಈರಮ್ಮ, ಶಹಿಲ್ಪಾ ಬರದೇಲಿ ತಮ್ಮ ಅನಿಸಿಕೆ ಹಂಚಿಕೊoಡರು. 25 ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಹುನಗುಂದ ಗ್ರಾ.ಪಂ ಸದಸ್ಯ ತುಕಾರಾಮ ಹೊನಳ್ಳಿ, ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟಿ ಯೋಜನಾ ಸಂಯೋಜಕ ವಿನಾಯಕ ಚೌವ್ಹಾಣ, ಟಾಟಾ ಹಿಟಾಚಿ ಕನ್ಸ್ಟ್ರಕ್ಷನ್ ಮಶಿನರಿ ಪ್ರೈ .ಲಿ. ಕಂಪನಿಯ ಅಡ್ಮಿನ್ ಅಜಿತ ಕುಲಕರ್ಣಿ, ಹುನಗುಂದ ಸೊಸೈಟಿ ಸೆಕ್ರೆಟರಿ ರಾಮಕೃಷ್ಣ, ಗ್ರಾ.ಪಂ ಸದಸ್ಯ ತುಕಾರಾಮ ಹೊನ್ನಳ್ಳಿ, ಈಶ್ವರ ಗೌಡ ಅರಳಿಹೊಂಡ, ಸಾಮಾಜಿಕ ಕಾರ್ಯಕರ್ತ ಬಸವರಾಜ ಆಸ್ತಿಕಟ್ಟಿ, ಸಿಬಿಆರ್‌ಸೆಟಿ ಯೋಜನಾಧಿಕಾರಿ ಮಹಾಬಲೇಶ್ವರ ನಾಯ್ಕ್, ಸ್ವಾಮಿ, ನಾಗಮ್ಮ ರಾಣೆಬೆನ್ನೂರ, ಈರಯ್ಯ ಚಿಕ್ಕಮಠ ಇದ್ದರು.