ಶಿರಸಿ: ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ವತಿಯಿಂದ ಕಾನಗೋಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದತಂಹ ಗಂಗಾಧರ ನಾಯ್ಕ ಅವರು ಹೃದಯಾಘಾತದಿಂದ ಮರಣ ಹೊಂದಿದ ಕಾರಣ ಸಹಾಯ ಧನವಾಗಿ ರೂ.10,000/-ಗಳ ಮೊತ್ತದ ಚೆಕ್‌ನ್ನು ಮೃತ ಗಂಗಾಧರ ನಾಯ್ಕ ಅವರ ಪತ್ನಿಯಾದ ಶ್ರೀಮತಿ ರೇಣುಕಾ ಗಂಗಾಧರ ನಾಯ್ಕ ಇವರಿಗೆ ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘ ಅಧ್ಯಕ್ಷರಾದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರು ಕಾನಗೋಡ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ವಿತರಿಸಿದರು.
ಚೆಕ್ ವಿತರಸಿ ಮಾತನಾಡಿದ ಅವರು ಕಾನಗೋಡ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಾದತಂಹ ಗಂಗಾಧರ ನಾಯ್ಕ ಅವರು ಕಾನಗೋಡ ಹಾಲು ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸುತ್ತಿದ್ದ ಒಬ್ಬ ಉತ್ತಮ ಹೈನುಗಾರರಾಗಿದ್ದು, ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡತಂಹ ಒಬ್ಬ ಕ್ರೀಯಾಶೀಲ ರೈತರಾಗಿದ್ದರು. ಒಕ್ಕೂಟದ ಕಲ್ಯಾಣ ಸಂಘದ ಸದಸ್ಯರಾದಂತಹ ಅವರು ಹೃದಯಾಘಾತದಿಂದ ಅಕಾಲಿಕ ಮರಣ ಹೊಂದಿದ ಕಾರಣ ಒಕ್ಕೂಟದ ಕಲ್ಯಾಣ ಸಂಘದಿಂದ ಮೃತರ ಕುಟುಂಬಕ್ಕೆ ಸಹಾಯ ಒದಗಿಸುವ ದೃಷ್ಠಿಯಿಂದ ರೂ.10,000/-ಗಳ ಮೊತ್ತದ ಚೆಕ್‌ನ್ನು ಕಾನಗೋಡ ಹಾಲು ಸಂಘದ ಅಧ್ಯಕ್ಷರು ಹಾಗೂ ಇನ್ನಿತರ ಹಿರಿಯ ಆಡಳಿತ ಮಂಡಳಿಯ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಜಿಲ್ಲೆಯಲ್ಲಿ ಹಾಲು ಉತ್ಪಾದನೆಯು ಇಳಿಮುಖವಾಗುತ್ತಿದ್ದು, ಬೇಡಿಕೆಗೆ ಅನುಗುಣವಾಗಿ ಹಾಲನ್ನು ಪೂರೈಸಬೇಕಾದ ಜವಾಬ್ದಾರಿ ನಮ್ಮ ಒಕ್ಕೂಟಕ್ಕೆ ಇರುವುದರಿಂದ ಈ ನಿಟ್ಟಿನಲ್ಲಿ ಹಾಲಿನ ಉತ್ಪಾದನೆಯನ್ನು ಜಿಲ್ಲೆಯಾದ್ಯಂತ ಹೆಚ್ಚಿಸಬೇಕೆಂದು ಜಿಲ್ಲೆಯ ಎಲ್ಲಾ ರೈತರಲ್ಲಿ ಅವರು ಮನವಿ ಮಾಡಿ ಈ ಕುರಿತಂತೆ ಸಂಘದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಹಾಲು ಉತ್ಪಾದಕರೊಂದಿಗೆ ಚರ್ಚಿಸಿದರು. ನಂತರ ಕಾನಗೋಡ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವಿನಾಯಕ ಹೆಗಡೆ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರಿಂದ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾನಗೋಡ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಿನಾಯಕ ಹೆಗಡೆ, ಸಂಘದ ಆಡಳಿತ ಮಂಡಳಿ ಸದಸ್ಯರು, ಸಂಘದ ಮುಖ್ಯ ಕಾರ್ಯ ನಿರ್ವಾಹಕರಾದ ದೇವಿದಾಸ ಹುಲಸ್ವಾರ, ಧಾರವಾಡ ಸಹಕಾರ ಹಾಲು ಒಕ್ಕೂಟದ ವಿಸ್ತರಣಾ ಸಮಾಲೋಚಕ ಅಭಿಷೇಕ ನಾಯ್ಕ,ಸಂಘದ ಹಾಲುಉತ್ಪಾದಕರು ಹಾಗೂ ಊರ ನಾಗರೀಕರು ಉಪಸ್ಥಿತರಿದ್ದರು.