ಜೊಯಿಡಾ: ತಾಲೂಕಿನ ಗಡಿ ಗ್ರಾಮ ಡಿಗ್ಗಿ ಮತ್ತು ಸುತ್ತಲಿನ ಗ್ರಾಮಗಳಿಗೆ ಮೂಲ ಭೂತ ಸೌಲಭ್ಯ ನೀಡಲು ಹಿಂದೇಟು ಹಾಕಲಾಗುತ್ತದೆ. ಸೌಲಭ್ಯ ನೀಡಲು ಆಗ್ರಹಿಸಿ ಜ.11ರಂದು ಕಿರವತ್ತಿಯಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸುವುದಾಗಿ ಮೂಲಸೌಕರ್ಯ ಹೋರಾಟ ಸಮಿತಿಯಿಂದ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬಜಾರಕುಣಂಗ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ 25ಕ್ಕೂ ಹೆಚ್ಚು ಗ್ರಾಮಗಳು ಹಾಗೂ ಕಾತೇಲಿ ಗ್ರಾಮ ಪಂಚಾಯತದ ಭಾಮಣೆ, ಪಾತಾಗೂಡಿ, ಸಿರವೋಳಿ, ತೇರಾಳಿ ಗ್ರಾಮಗಳಿಗೆ ರಸ್ತೆ ಸೇರಿದಂತೆ ಮೂಲ ಭೂತ ಸೌಲಭ್ಯ ನೀಡಲು ಅಸಾಧ್ಯವಾಗಿದೆ. ಜನರ ಸಂಪರ್ಕಕ್ಕೆ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ನಡುಗಡ್ಡೆಯಲ್ಲಿ ಬದುಕ ಬೇಕು. ಗೋವಾ ಗಡಿ ರಾಜ್ಯ ಹೆದ್ದಾರಿ ದಾಂಬರಿಕರಣ, ತೆರಾಳಿ ಡಿಗ್ಗಿ ರಸ್ತೆ ದಾಂಬರಿಕರಣ, ಘಡಾವಲಿ ಸೇತುವೆ, ಜೋಯಿಡಾದಿಂದ ಗವಳಾದೇವಿ ಹಾಗೂ ಭಾಮಣೆ ಬಸ್ ಪ್ರಾರಂಭಿಸಬೇಕು. ಇಲ್ಲದಿದ್ದರೆ ಸದಾಶಿವಗಡ ರಾಮನಗರ ರಾಜ್ಯ ಹೆದ್ದಾರಿ ಕಿರವತ್ತಿಯಲ್ಲಿ ತಡೆದು ಪ್ರತಿಭಟಿಸುವುದಾಗಿ ಸಮಿತಿಯಿಂದ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಅಧ್ಯಕ್ಷ ಪ್ರಕಾಶ ಮಿರಾಶಿ, ಉಪಾಧ್ಯಕ್ಷ ತುಕಾರಾಮ ಗಾವಡಾ, ಕಾರ್ಯದರ್ಶಿ ದೇವಿದಾಸ ಮಿರಾಶಿ, ಬಜಾರಕುಣಂಗ ಗ್ರಾ.ಪಂ.ನ ವಿನೋದ ದೇಸಾಯಿ, ತಾಲೂಕು ಕುಣಬಿ ಸಮಾಜದ ಅಧ್ಯಕ್ಷ ಅಜಿತ ಮಿರಾಶಿ, ಕಾತೇಲಿ ಗ್ರಾ.ಪಂ. ಸದಸ್ಯ ರತ್ನಾಕರ ದೇಸಾಯಿ, ದತ್ತಾ ಮಿರಾಶಿ, ರವಿ ಮಿರಾಶಿ, ರವಿದಾಸ ಮಿರಾಶಿ, ರಮೇಶ ಗಾವಡಾ, ರತ್ನಾಕರ ಗಾವಡಾ, ಸುರೇಶ ಮಿರಾಶಿ, ಸಖಾರಾಮ ಮಿರಾಶಿ, ನಂದಾ ಗಾವಡಾ, ಸಂತೋಷ ವೆಳಿಪ ಕಾರಟೋಳಿ ಮುಂತಾದವರು ಇದ್ದರು.