ಶಿರಸಿ: ಇತ್ತೀಚೆಗೆ ಭಟ್ಕಳದ ಅಂಜುಮನ್ ಕಾಲೇಜಿನಲ್ಲಿ ನಡೆದ STEM 2K22 ಎಂಬ ರಾಜ್ಯ ಮಟ್ಟದ ವಿಜ್ಞಾನ ಸ್ಪರ್ಧೆಯ Model Expo ವಿಭಾಗದಲ್ಲಿ ನಗರದ ಚೈತನ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿ, ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ.
ದ್ವಿತೀಯ ಪಿಯುಸಿಯ ಯಶಸ್ವಿ ಹೆಗಡೆ ಹಾಗೂ ಶ್ರೇಯಾ ಡಿ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಪ್ರಥಮ, ಪ್ರಥಮ ಪಿಯುಸಿಯ ವಿದ್ಯಾರ್ಥಿಯಾದ ಆದಿತ್ಯ ಹೆಗಡೇಕಟ್ಟೆ, ಶ್ರದ್ಧಾ, ಶುಭಾಶಿನಿ ಹೆಗಡೆ ಇವರ ತಂಡ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತೃತೀಯ, ಪೋಸ್ಟರ್ ಪ್ರೆಸೆಂಟೇಷನ್ ವಿಭಾಗದಲ್ಲಿ ಯಶಸ್ವಿ ಹೆಗಡೆ ಮತ್ತು ಶ್ರೇಯಾ ಹೆಗಡೆ ದ್ವಿತೀಯ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಉಪನ್ಯಾಸಕ ಅಕ್ಷಯ್ ಮಾಷೆಲ್ಕರ್ ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಹೆಗಡೆಕಟ್ಟೆ, ಅಧ್ಯಾಪಕ ವೃಂದ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ, ಉಪಸಮಿತಿಯ ಅಧ್ಯಕ್ಷ ಕೆ.ಬಿ. ಲೋಕೇಶ್ ಹೆಗಡೆ ಹಾಗೂ ಸದಸ್ಯರು ಹರ್ಷ ವ್ಯಕ್ತಪಡಿಸಿ, ಶುಭ ಹಾರೈಸಿದ್ದಾರೆ.