ಹೊನ್ನಾವರ: ತಾಲೂಕಿನ ನಾಮಧಾರಿ ಕ್ರೀಡಾ ವೇದಿಕೆಯ ವತಿಯಿಂದ ಆಯೋಜಿಸಿದ ರಾಜ್ಯ ಮಟ್ಟದ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ‘ನಾಮಧಾರಿ ಟ್ರೋಫಿ’ ಸಂತೇಗುಳಿಯ ಮಹಾಸತಿ ಕ್ರೀಡಾಗಂಣದಲ್ಲಿ ಗುರುವಾರ ಆರಂಭಗೊoಡಿತು.
ಕ್ರೀಡಾಕೂಟ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ, ನಾಮಧಾರಿ ಸಮಾಜ ಹಿಂದಿನ ಬಡತನದ ಮೆಟ್ಟಿ ನಿಂತು ಇಂದು ದೊಡ್ಡ ಮಟ್ಟದ ಬೆಳವಣಿಗೆ ಹೊಂದಿದೆ. ಕ್ರೀಡೆಯ ಜೊತೆಗೆ ಶೈಕ್ಷಣಿಕವಾಗಿ ಸಮಾಜದ ಯುವಕರು ಸಾಧನೆ ಮಾಡುತ್ತಿದ್ದಾರೆ. ಮುಂದಿನ ದಿನದಲ್ಲಿ ಇಂದು ಚಾಲನೆಗೊಂಡ ನಾಮಧಾರಿ ವಿಕಾಸ ವೇದಿಕೆಯ ಮುಖಾಂತರ ಕಟ್ಟಕಡೆಯ ಸಮಾಜದ ವ್ಯಕ್ತಿಗೂ ನೆರವಾಗುವಂತಾಗಲಿ ಎಂದು ಶುಭ ಹಾರೈಸಿದರು.
ನಾಮಧಾರಿ ವಿಕಾಸ ವೇದಿಕೆಯ ಲೋಗೊ ಆನಾವರಣಗೊಳಿಸಿದ ಕಾಂಗ್ರೆಸ್ ಮುಖಂಡ ಮಂಜುನಾಥ ನಾಯ್ಕ ಮಾತನಾಡಿ ನಾಮಧಾರಿ ಸಮಾಜದವರು ಕ್ರೀಡೆ, ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಹೆಮ್ಮರವಾಗಿ ಬೆಳೆದಿದೆ. ನಮ್ಮ ಸಮಾಜ ಪ್ರೀತಿಸುವ ಜೊತೆ ಇತರೆ ಸಮಾಜ ಗೌರವಿಸುವ ಮೂಲಕ ಮಾದರಿ ಸಮಾಜವಾಗಿ ಹೊರಹೊಮ್ಮಿದೆ. ಪ್ರತಿಯೊಂದು ಜಾತಿ ಧರ್ಮದಲ್ಲಿಯೂ ಒಳ್ಳೆಯವರು ಕೆಟ್ಟವರು ಇರುತ್ತಾರೆ. ಆದರೆ ಒಳ್ಳೆಯ ವ್ಯಕ್ತಿಗಳು ಯಾವ ಸಮಾಜ, ಧರ್ಮದಲ್ಲಿದ್ದರೂ ಅವರನ್ನು ಪೊತ್ಸಾಹಿಸೋಣ ಎಂದರು.
ಕ್ರೀಡಾoಗಣ ಉದ್ಘಾಟಿಸಿದ ಮಾಜಿ ಜಿ.ಪಂ.ಸದಸ್ಯ ರತ್ನಾಕರ ನಾಯ್ಕಮಾತನಾಡಿ ನಾಮಧಾರಿ ವಿಕಾಸ ವೇದಿಕೆಯು ನೊಂದವರು ಬೆಂದವರಿಗೆ ಪ್ರೋತ್ಸಾಹ ನೀಡುವಂತಾಗಲಿ. ಕೇವಲ ಕ್ರೀಡಾಕೂಟ ಮಾತ್ರ ನಡೆಸದೆ ಭವಿಷ್ಯದ ಚಿಂತನೆ ನಡೆಸಿ ವಿಕಾಸ ವೇದಿಕೆ ಆರಂಭಿಸಿರುವುದು ಮಾದರಿ ಕಾರ್ಯ ಎಂದರು.
ಆಕರ್ಷಕ ಟ್ರೋಫಿ ಅನಾವರಣವನ್ನು ಕಾಂಗ್ರೆಸ್ ಮುಖಂಡ ಅಯ್ಯಪ್ಪ ನಾಯ್ಕ ನೇರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ವಹಿಸಿದ್ದರು. ಹಳದೀಪುರ ಗ್ರಾ.ಪಂ.ಅಧ್ಯಕ್ಷ ಅಜಿತ್ ನಾಯ್ಕ, ಹೊಸಾಕುಳಿ ಗ್ರಾ.ಪಂ. ಅಧ್ಯಕ್ಷೆ ಸುರೇಖಾ ನಾಯ್ಕ, ಉಪಾಧ್ಯಕ್ಷ ಸಚೀನ ನಾಯ್ಕ,ಮಾಜಿ ತಾ.ಪಂ.ಸದಸ್ಯ ತುಕಾರಾಂ ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಆರ್.ಟಿ.ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ ನಾಯ್ಕ, ಎಂ.ಜಿ.ನಾಯ್ಕ, ಮುಗ್ವಾ ನಾಮಧಾರಿ ಸಂಘದ ಮುಖಂಡರಾದ ಏಕನಾಥ ನಾಯ್ಕ, ನಾಮಧಾರಿ ಟ್ರೋಫಿ ಸಂಘದ ಮುಖಂಡ ರವಿ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಸತೀಶ ನಾಯ್ಕ ಸ್ವಾಗತಿಸಿ, ಗಣೇಶ ನಾಯ್ಕ ವಂದಿಸಿದರು. ನಾಮಧಾರಿ ನೌಕರರ ಸಂಘದ ಅಧ್ಯಕ್ಷ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ವಿವಿಧಡೆಯಿಂದ 17 ತಂಡಗಳು ಭಾಗವಹಿಸಿದ್ದು, ಸಭಾ ಕಾರ್ಯಕ್ರಮದ ಬಳಿಕ ಕ್ರಿಕೆಟ್ ಪಂದ್ಯಾವಳಿ ಆರಂಭಗೊoಡಿತು.