ಮುಂಡಗೋಡ: ಚಿಗಳ್ಳಿ ಹುಲಿಗೆಮ್ಮ ದೇವಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಹುಬ್ಬಳ್ಳಿ ತತ್ವದರ್ಶ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ತತ್ವದರ್ಶ ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕ ಶಿವಕುಮಾರ ಆರ್., ಡಾ.ಜ್ಯೋತಿ ಎಮ್., ಡಾ.ಶ್ವೇತಾ ರೋಗಿಗಳನ್ನು ತಪಾಸಣೆ ನಡೆಸಿ ರೋಗಿಗಳಿಗೆ ಸೂಕ್ತ ಸಲಹೆ ನೀಡಿದರು. ಬಿ.ಸಿ.ಹುಲಿಗೆಮ್ಮ ದೇವಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯನ್ನು ಹುಟ್ಟು ಹಾಕಿ ಸಾಮಾಜಿಕ ಸೇವೆ ಕೈಗೊಳ್ಳುತ್ತಿರುವ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಭೋವಿವಡ್ಡರ ಉಪಸ್ಥಿತರಿದ್ದರು.