• Slide
    Slide
    Slide
    previous arrow
    next arrow
  • ಬಳಕೆಗೆ ಬಾರದ ಶಿರಸಿ ಒಣಮೀನು ಮಾರುಕಟ್ಟೆ

    300x250 AD

    ಶಿರಸಿ: ನಗರದ ಕುಮಟಾ ರಸ್ತೆಯಲ್ಲಿರುವ ಹಸಿ ಮೀನು ಮಾರುಕಟ್ಟೆಯ ಬದಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಒಣಮೀನು ಮಾರುಕಟ್ಟೆ ಉದ್ಘಾಟನೆಯ ಭಾಗ್ಯ ಕಂಡರೂ ಅದನ್ನು ಒಣ ಮೀನು ವ್ಯಾಪರಸ್ಥರು ಬಳಸಿಕೊಳ್ಳುವ ಭಾಗ್ಯ ಬಂದoತೆ ಕಾಣುತ್ತಿಲ್ಲ.
    ಈ ಮೀನು ಮಾರುಕಟ್ಟೆ ಕಳೆದ ಒಂದು ತಿಂಗಳ ಹಿಂದೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಜಂಟಿಯಾಗಿ ಉದ್ಘಾಟಿಸಿದಾಗ ಇನ್ನೇನು ಒಂದು ವಾರದಲ್ಲಿ ಒಣಮೀನು ಮಾರುಕಟ್ಟೆ ಬಳಕೆಯಾಗಬಹುದೆಂದು ಒಣಮೀನು ವ್ಯಾಪಾರಸ್ಥರಂತೆ ಸಾರ್ವಜನಿಕರು ತಿಳಿದುಕೊಂಡಿದ್ದರು. ಆದರೆ ತಿಂಗಳಾದರೂ ಒಣ ಮೀನು ವ್ಯಾಪಾರಸ್ಥರಿಗೆ ಅಂಗಡಿ ಹಂಚಿಗೆಯಾಗದಿರುವ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
    ಬೇಸಿಗೆ ಕಾಲವಾಗಿದ್ದರಿಂದ ಶಿರಸಿಯಲ್ಲಿರುವ 15ಕ್ಕೂ ಹೆಚ್ಚಿನ ಒಣಮೀನು ವ್ಯಾಪರಸ್ಥರು ಸುಡು ಬಿಸಿಲಿನಲ್ಲಿಯೇ ಒಣ ಮೀನಿನಂತೆ ವ್ಯಾಪಾರ ಮಾಡುತ್ತಿದ್ದಾರೆ. ಈ ವ್ಯಾಪಾರಸ್ಥರು ಸಾಮಾನ್ಯವಾಗಿ ವಯಸ್ಸಾದವರೇ ಹೆಚ್ಚಾಗಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಒಂದು ಸೂರಿನಡಿಯಲ್ಲಿ ವ್ಯಾಪಾರ ಮಾಡುವ ಅವಶ್ಯಕತೆಯಿದೆ. ಆದರೆ ನಗರಸಭೆಯವರು ಇಂಥವರಿಗಾಗಿಯೇ ಮಾರುಕಟ್ಟೆ ನಿರ್ಮಿಸಿ ತಿಂಗಳುಗಟ್ಟಲೆ ಯಾರ ಬಳಕೆಗೂ ನೀಡದೇ ಹಾಗೆಯೇ ಬಿಟ್ಟರೆ ಇದ್ಯಾವ ನ್ಯಾಯ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.

    ಕೋಟ್…
    ಒಣಮೀನು ಮಾರುಕಟ್ಟೆ ಕರಾವಳಿ ಪ್ರಾಧಿಕಾರದಿಂದ ನಮಗೆ ಹಸ್ತಾಂತರವಾಗಲು ವಿಳಂಬವಾಗಿದೆ. ಇನ್ನೆರಡು ವಾರದಲ್ಲಿ ಒಣಮೀನು ವ್ಯಾಪರಸ್ಥರಿಗೆ ಟೆಂಡರ್ ಮೂಲಕ ಹಂಚಿಕೆ ಮಾಡಲಾಗುವುದು. ಅಲ್ಲಿ ಹಣ್ಣು, ಚಿಕನ್ ಮತ್ತು ಮಟನ್ ಮಾರಾಟ ಮಾಡುವವರಿಗೂ ಅವಕಾಶ ಮಾಡಿಕೊಡಲಾಗುವುದು.
    • ಗಣಪತಿ ನಾಯ್ಕ, ನಗರಸಭೆ ಅಧ್ಯಕ್ಷ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top