ಹೊನ್ನಾವರ: ತಾಲೂಕಿನ ಕಡತೋಕಾ ಗ್ರಾ.ಪಂ. ವ್ಯಾಪ್ತಿಯ ಪೇಟೆಕಟ್ಟು ಹತ್ತಿರ ಖಾರ್ಲ್ಯಾಂಡ್ ನಿರ್ಮಾಣ ಕಾಮಗಾರಿಗೆ ಶಾಸಕ ದಿನಕರ ಶೆಟ್ಟಿ ಶನಿವಾರ ಶಂಕುಸ್ಥಾಪನೆ ನೆರವೇರಿಸಿದರು.
ಸಣ್ಣನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಅಡಿಯಲ್ಲಿ 6 ಕೋಟಿ 74 ಲಕ್ಷ ರೂಪಾಯಿ ವೆಚ್ಚದ ಖಾರಲ್ಯಾಂಡ್ ಇದಾಗಿದ್ದು ದಶಕಗಳ ಕಡತೋಕಾ ಹಾಗೂ ನವಿಲಗೋಣ ಗ್ರಾಮದ ರೈತರ ಬಹುವರ್ಷದ ಬೇಡಿಕೆ ಈಡೇರಿದಂತಾಗಿದೆ.
ಸಭಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಕಡತೋಕಾ ಹಾಗೂ ವಾಲಗಳ್ಳಿ ಭಾಗದ ರೈತರ ಜಮೀನುಗಳಿಗೆ ಉಪ್ಪುನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿತ್ತು. ಇದರ ಬಗ್ಗೆ ಸ್ಥಳೀಯ ರೈತರು ಬಹುಕಾಲದಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು. ರಾಜ್ಯ ಸರ್ಕಾರ ಖಾರ್ ಲ್ಯಾಂಡ್ ನಿರ್ಮಾಣಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಒದಗಿಸಿದೆ. ಈ ಹಿಂದೆ ಐದು ಕೋಟಿ ಬಿಡುಗಡೆಯಾಗುತ್ತಿತ್ತು. ಆದರೆ ಈ ಬಾರಿ ನಮ್ಮ ಕ್ಷೇತ್ರಕ್ಕೆ 186 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ರೈತರ ಬಗ್ಗೆ ಬಿಜೆಪಿ ಸರ್ಕಾರ ವಿವಿಧ ಯೋಜನೆಯನ್ನು ಮನೆಬಾಗಿಲಿಗೆ ತಲುಪಿಸಿದೆ. ಕೃಷಿ ಸಮ್ಮಾನ ಯೋಜನೆಯ ಮೂಲಕ ಆರ್ಥಿಕ ಸಹಕಾರ ನೀಡುವ ಮೂಲಕ ಮಧ್ಯವರ್ತಿಯ ಹಾವಳಿ ತಪ್ಪಿಸಿದೆ. ಮುಂದಿನ ದಿನದಲ್ಲಿ ಬಿಜೆಪಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ನವಿಲಗೋಣ ಗ್ರಾ.ಪಂ. ಅಧ್ಯಕ್ಷ ಸತೀಶ್ ಹೆಬ್ಬಾರ, ಕಡ್ಲೆ ಗ್ರಾ.ಪಂ. ಅಧ್ಯಕ್ಷ ಕೃಷ್ಣ ಗೌಡ, ಸದಸ್ಯರಾದ ರವಿ ನಾಯ್ಕ, ಪಾವ್ಲು ಗೊನ್ಸಾಲ್ವಿಸ್, ಮಹಾದೇವಿ ನಾಯ್ಕ, ರಾಘವೇಂದ್ರ ಭಟ್, ದೇವು ಮುಕ್ರಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶ್ರೀಕಾಂತ್ ಭಟ್, ನಿವೃತ್ತ ಪ್ರೊಫೆಸರ್ ಐ.ವಿ.ಜೋಷಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅನಿಲಕುಮಾರ್, ಗುತ್ತಿಗೆದಾರ ದಿನೇಶ ಹೆಗಡೆ, ಊರಿನ ಹಿರಿಯರಾದ ಕೃಷ್ಣ ನಾಯ್ಕ, ಬಿಜೆಪಿ ಪಕ್ಷದ ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.