ಶಿರಸಿ: ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ನಾಲ್ಕನೆಯ ರಾಷ್ಟ್ರಮಟ್ಟದ ಸಮ್ಮೇಳನವು ಆಂಧ್ರಪ್ರದೇಶದ ಮಂತ್ರಾಲಯದಲ್ಲಿ ಡಿ.25,ರವಿವಾರದಂದು ನಡೆಯಲಿದೆ. ಆಂಧ್ರದ ಖ್ಯಾತ ವಿದ್ವಾಂಸ ಡಾ.ರಾಜಾ ಎಸ್. ಗಿರಿ ಆಚಾರ್ಯ ಅವರ ಸರ್ವಾಧ್ಯಕ್ಷತೆಯಲ್ಲಿ ಈ ಸಮ್ಮೇಳನ ಏರ್ಪಾಟಾಗಿದ್ದು,
ಶಿರಸಿ ನಗರದ ಬಹುಶ್ರುತ ವಿದ್ವಾಂಸ ನಿವೃತ್ತ ಡೀನ್ ಸಾಹಿತಿ ಪ್ರೊ. ಡಾ. ಜಿ ಎ. ಹೆಗಡೆ ಸೋಂದಾ ಅವರು ವಿಶೇಷ ಆಮಂತ್ರಿತರಾಗಿ, ವೈಚಾರಿಕ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಮ್ಮ ವಿಚಾರ ಮಂಡಿಸಲಿದ್ದಾರೆ ಮತ್ತು ಗೌರವ ಸನ್ಮಾನಕ್ಕೆ ಭಾಗಿಯಾಗಲಿದ್ದಾರೆ.
ರಾಷ್ಟ್ರದ ವಿವಿಧ ಭಾಗಗಳಿಂದ ಪರಿಣಿತರು ಗಣ್ಯ ಸಾಹಿತಿಗಳು ಭಾಗವಹಿಸಲಿದ್ದು ಪ್ರಶಸ್ತಿ ಪುರಸ್ಕಾರ ಮತ್ತು ಗೌರವ ಸಂಮಾನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ಕವಿ ಕೃಷ್ಣ ಪದಕಿ, ಚಿಂತಕ ಗಣಪತಿ ವರ್ಗಾಸರ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.
ಮಂತ್ರಾಲಯದಲ್ಲಿ ಡಾ. ಸುಬುದೇಂದ್ರ ತೀರ್ಥ, ಶ್ರೀಪಾದಂಗಳ ಸಾನ್ನಿಧ್ಯದಲ್ಲಿ ಈ ಅಭೂತ ಪೂರ್ವ ಪೂರ್ವ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷವಾಗಿದೆ.