ಸಿದ್ದಾಪುರ: ಕರ್ನಾಟಕ ಸರ್ಕಾರ, ಆಯುಷ್ ಇಲಾಖೆ, ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ (ಉ.ಕ), ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ (ಉ.ಕ) ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ 2022- 23 ನೇ ಸಾಲಿನ ಆಯುಷ್ ಸೇವಾ ಗ್ರಾಮ ಎಸ್.ಸಿ.ಎಸ್.ಪಿ ಯೋಜನೆ ಅಡಿಯಲ್ಲಿ ತಾಲೂಕಿನ ಹೆಗ್ಗರಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತಿಬೈಲ್ ಹಾಗೂ ಉಂಚಳ್ಳಿಯಲ್ಲಿ ಆಯುಷ್ ಸೇವಾಗ್ರಾಮದ ನಾಮಫಲಕ ಅನಾವರಣವನ್ನು ಹೆಗ್ಗರಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಸರೋಜಾ ರಾವ್ ಹಾಗೂ ಸದಸ್ಯೆ ಶ್ರೀಮತಿ ಪಾರ್ವತಿ ಚಿನ್ನಯ್ಯಾ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಯುಷ್ ನೋಡಲ್ ಅಧಿಕಾರಿ ವೈದ್ಯರತ್ನ ಡಾ.ಜಗದೀಶ ಯಾಜಿ ಮಾತನಾಡಿ, ಆಯುಷ್ ಸೇವಾ ಗ್ರಾಮ ಯೋಜನೆಯ ಬಗ್ಗೆ ನೆರೆದಿದ್ದವರಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಹೆಗ್ಗರಣಿಯ ಆಯುಷ್ ವೈದ್ಯಾಧಿಕಾರಿ ಡಾ. ವಿಕ್ರಮ ಜಿ. ದೇಶಭಂಡಾರಿ, ಮತ್ತಿಘಟ್ಟದ ಆಯುಷ್ ವೈದ್ಯಾಧಿಕಾರಿ ಡಾ.ಪ್ರಸನ್ನ ಎಸ್, ಮಾಸ್ತಿಬೈಲ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಶೆಟ್ಟಿ, ಶಿಕ್ಷಕರಾದ ಶ್ರೀಮತಿ ಗಾಯತ್ರಿ, ಅಂಗನವಾಡಿ ಶಿಕ್ಷಕಿ ಶ್ರೀಮತಿ ವಿದ್ಯಾ ಭಟ್ ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಗೂ ಮಾಸ್ತಿಬೈಲ್ ಗ್ರಾಮದ ಜನರು ಉಪಸ್ಥಿತರಿದ್ದರು.