Slide
Slide
Slide
previous arrow
next arrow

ಕೋನಳ್ಳಿಯಲ್ಲಿ ಕುಮಟಾ ಕನ್ನಡ ಸಾಹಿತ್ಯ ಸಮ್ಮೇಳನ

300x250 AD

ಕುಮಟಾ: ಪ್ರಸಕ್ತ ಸಾಲಿನ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೋನಳ್ಳಿಯಲ್ಲಿ ನಡೆಸುವ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕವು ನಿರ್ಣಯ ಕೈಗೊಂಡಿತು.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಕಸಾಪ ತಾಲೂಕು ಅಧ್ಯಕ್ಷ ಸುಬ್ಬಯ್ಯ ನಾಯ್ಕ ಮಾತನಾಡಿದರು. ಇತ್ತೀಚೆಗೆ ಕೋನಳ್ಳಿಯಲ್ಲಿ ನಿರ್ಮಿಸಲಾದ ವನದುರ್ಗಾ ಸಭಾಭವನದಲ್ಲಿ ಸಾವಿರ ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇದೆ. ಆವರಣ ವಿಶಾಲವಾಗಿದ್ದರಿಂದ ವಾಹನ ನಿಲುಗಡೆ, ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲ ಸೌಕರ್ಯಗಳಿದ್ದು, ನಮ್ಮ ಊರಿನ ಜನರ ಬೆಂಬಲ ಕೂಡ ಇದೆ. ಉತ್ತಮ ಊಟದ ವ್ಯವಸ್ಥೆಯ ಜೊತೆಗೆ ಸಾಹಿತ್ಯಾಭಿಮಾನಿಗಳನ್ನು ಸತ್ಕರಿಸಲು ನಮ್ಮ ಊರಿನ ಜನರು ಉತ್ಸುಕರಾಗಿದ್ದಾರೆ. ಈ ಸಂಬಂಧ ವನದುರ್ಗಾ ಸಭಾಭವನದ ಅಧ್ಯಕ್ಷರೊಂದಿಗೆ ಚರ್ಚಿಸಿದ್ದು, ಅವರು ಒಪ್ಪಿಗೆ ನೀಡಿದ್ದಾರೆ. ಸಮ್ಮೇಳನದ ದಿನಾಂಕ ನಿಗದಿಪಡಿಸಿ, ಅಧ್ಯಕ್ಷರ ಆಯ್ಕೆ ಬಗ್ಗೆ ಇನ್ನೊಮ್ಮೆ ಸಭೆ ಸೇರೋಣ ಎಂದರು.
ಕಾರ್ಯದರ್ಶಿ ಪ್ರಮೋದ ನಾಯ್ಕ ಮಾತನಾಡಿ, ಎಲ್ಲೆ ಸಾಹಿತ್ಯ ಸಮ್ಮೇಳನ ನಡೆದರೂ ಅಲ್ಲಿ ಸಾಹಿತ್ಯಿಕ ವಾತಾವರಣ ನಿರ್ಮಿಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು. ಕಸಾಪದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸಲು ಹಣಕಾಸಿನ ನೆರವು ಸೇರಿದಂತೆ ವಿವಿಧ ಸಮಿತಿ ರಚಿಸಿಕೊಂಡು ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಂತೆ ಸಲಹೆ ನೀಡಿದರು.
ಕಸಾಪದ ಮಾಜಿ ಜಿಲ್ಲಾಧ್ಯಕ್ಷ ರೋಹಿದಾಸ ನಾಯ್ಕ ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳನ್ನು ಅರ್ಥಪೂರ್ಣವಾಗಿ ನಡೆಸಲು ಪ್ರಬುದ್ಧ ಕವಿಗಳ, ಸಾಹಿತಿಗಳ ಆಯ್ಕೆಯನ್ನು ಸಮರ್ಪಕವಾಗಿ ನಡೆಸಬೇಕು. ಅತಿಥಿಗಳ ಭಾಷಣಕ್ಕೆ ನಿರ್ದಿಷ್ಟ ಸಮಯ ನಿಗದಿಪಡಿಸಬೇಕು. ಸ್ಥಳೀಯ ಕವಿಗಳಿಗೆ, ಸಾಹಿತಿಗಳಿಗೆ ಆಧ್ಯತೆ ನೀಡಬೇಕು. ಗೀತ-ಸಂಗೀತವು ಸಮ್ಮೇಳನದ ಆಕರ್ಷಣೀಯವಾಗಿದ್ದು, ಉತ್ತಮ ಗಾಯಕರನ್ನೆ ಆಹ್ವಾನಿಸಬೇಕು ಎಂದರು.
ಸಭೆಯಲ್ಲಿ ಸಾಹಿತಿಗಳಾದ ಪುಟ್ಟು ಕುಲ್ಕರರ್ಣಿ, ಬೀರಣ್ಣ ನಾಯಕ, ಎನ್ ಆರ್ ಗಜು, ಸಂಧ್ಯಾ ಭಟ್, ಕಸಾಪ ಸದಸ್ಯರಾದ ಸುರೇಶ ಭಟ್, ಪ್ರಕಾಶ ನಾಯ್ಕ, ಮಂಜುನಾಥ ನಾಯ್ಕ ಚಂದಾವರ ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top