Slide
Slide
Slide
previous arrow
next arrow

ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹಿಸಿ ರಸ್ತೆ ತಡೆ ನಡೆಸಿದ ವಕೀಲರು

300x250 AD

ಮುಂಡಗೋಡ: ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ತಾಲೂಕಾ ವಕೀಲರ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಶಿವಾಜಿ ಸರ್ಕಲ್ ಬಳಿ ಮಾನವ ಸರಪಳಿ ನಿರ್ಮಿಸಿ ಕೆಲ ಸಮಯ ರಸ್ತೆ ತಡೆ ನಡೆಸಿ, ವಕೀಲರ ರಕ್ಷಣಾ ಕಾಯ್ದೆಯನ್ನ ಜಾರಿಗೊಳಿಸಬೇಕು. ನ್ಯಾಯ ದೊರಕಿಸಿಕೊಡುವರಿಗೇ ರಕ್ಷಣೆ ಇಲ್ಲವೆಂದರೆ ನ್ಯಾಯ ಕೊಡಿಸುವುದು ಹೇಗೆ ಎಂದು ಹೇಳಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಶಿವಾಜಿ ಸರ್ಕಲ್‌ದಿಂದ ಮಿನಿವಿಧಾನ ಸೌಧದವರೆಗೆ ಕಾಲ್ನಡಿಗೆ ಮೂಲಕ ತೆರಳಿ, ಉಪ ತಹಶೀಲ್ದಾರ ಗಣಪತಿ ಭಟ್ಟ ಅವರ ಮೂಲಕ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ನಟರಾಜ ಕಾತೂರ, ಉಪಾಧ್ಯಕ್ಷ ನಂದೀಶ ನಿಂಬಾಯಿ, ಕಾರ್ಯದರ್ಶಿ ರಾಜಶೇಖರ ಹುಬ್ಬಳ್ಳಿ, ನಿಕಟಪೂರ್ವ ಅಧ್ಯಕ್ಷ ಮಹಮ್ಮದಸಲೀಂ ನಂದಿಕಟ್ಟಿ, ಎಸ್.ಪಿ ಸಮ್ಮಸಗಿ, ಕೆ.ಎನ್ ಹೆಗಡೆ, ಗುಡ್ಡಪ್ಪ ಕಾತೂರ, ವಿಶ್ವನಾಥ ಪವಾರಶೇಟ್ಟರ, ರಾಘವೇಂದ್ರ ಮಳಗಿಕರ, ಸುಜೀತ, ಪ್ರಮೊದ ಸಣ್ಣಮನಿ, ರಾಜು ಹಂಚಿನಮನಿ, ರವಿಂದ್ರ ಹೆಗಡೆ ಹಾಗೂ ಶಿವಪುತ್ರ ಮಲವಳ್ಳಿ ಇದ್ದರು.

300x250 AD
Share This
300x250 AD
300x250 AD
300x250 AD
Back to top