ಕಾರವಾರ: ತಾಲೂಕಿನ ಚೆಂಡಿಯಾ ಗ್ರಾಪಂ ವ್ಯಾಪ್ತಿಯ ಒಕ್ಕಲಕೇರಿಯಲ್ಲಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿರುವ ಶ್ರೀಕೃಷ್ಣ ಮೂರ್ತಿಯ ಮಹಾಪೂಜೆಯು ಡಿ.23ರಂದು ನಡೆಯಲಿದ್ದು, ರಾತ್ರಿ ಮನರಂಜನೆಗಾಗಿ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಇಲ್ಲಿನ ಶ್ರೀ ಕೃಷ್ಣ ಬಾಲ ಭಕ್ತ ಮಂಡಳಿಯವರು ಪ್ರತಿಷ್ಠಾಪಿಸಿರುವ ಶ್ರೀಕೃಷ್ಣ ಮೂರ್ತಿಯ ಮಹಾಪೂಜೆ, ಫಲಾವಳಿಗಳ ಲೀಲಾವು, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ರಾತ್ರಿ 10.30ಕ್ಕೆ ಸ್ಥಳೀಯ ಕಲಾವಿದರಿಂದ ಜಲಕನ್ಯೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಈ ಯಕ್ಷಗಾನ ಪ್ರದರ್ಶನಕ್ಕೆ 6 ಚಪ್ಪರಗಳನ್ನು ಒಂದೆಡೆ ನಿರ್ಮಿಸಿ ರಂಗಸಜ್ಜಿಕೆಯನ್ನು ಸಿದ್ಧಪಡಿಸಲಾಗಿರುವುದು ವಿಶೇಷವಾಗಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀಕೃಷ್ಣ ಬಾಲ ಭಕ್ತ ಮಂಡಳಿಯವರು ಕೋರಿದ್ದಾರೆ.