ಕಾರವಾರ: ತಾಲೂಕಿನ ಪ್ರೌಢಶಾಲೆಗಳ 8 ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಲಿಖಿತ ಗಣಿತ ರಸಪ್ರಶ್ನೆ ಸ್ಪರ್ಧೆ, ಉಪನ್ಯಾಸ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪಂಚಾಯತಿ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚೆಚ್ಚು ಆಯೋಜಿಸಲು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎನ್.ನಾಯಕ, ಶ್ರೀನಿವಾಸ ರಾಮಾನುಜನ್ ಅವರ ಸಾಧನೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಮುಖ್ಯಾಧ್ಯಾಪಕ ರಾಜೇಂದ್ರ ನಾಯ್ಕ ಆಗಮಿಸಿ ಗಣಿತ ದಿನಾಚರಣೆಯ ಉದ್ದೇಶ, ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಸದಸ್ಯ ಕಾರ್ಯದರ್ಶಿ ಡಾ.ಸಂಜೀವ ದೇಶಪಾಂಡೆ ಸ್ವಾಗತಿಸಿದರು. ಜಿಲ್ಲಾ ಪಂಚಾಯತಿ ಎನ್‌ಆರ್‌ಡಿಎಮ್‌ಎಸ್ ತಾಂತ್ರಿಕ ಅಧಿಕಾರಿ ಅನಿಲ ನಾಯಕ ಕಾರ್ಯಕ್ರಮದ ಉಸ್ತುವಾರಿ ವಹಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಅಂಗಡಿ ಸೆಕೆಂಡರಿ ಇಂಗ್ಲೀಷ್ ಶಾಲೆಯ ಶಿಕ್ಷಕ ಸಂಜಯ ನಾಯಕ ವಂದಿಸಿದರು. ಮಾಜಾಳಿ ಯೂನಿಯನ್ ಪ್ರೌಢಶಾಲೆಯ ವಿಕಾಸ ವಿ.ಕೋಠಾರಕರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸೇರಿ ಸುಮಾರು 85 ಜನರು ಭಾಗವಹಿಸಿದ್ದರು.
ಬಹುಮಾನಿತರು:
ಸೇಂಟ್ ಮೈಕೆಲ್ಸ್ ಕಾನ್ವೆಂಟ್ ಪ್ರೌಢಶಾಲೆಯ ಸರ್ವಧಿ ರೇವಣಕರ ಪ್ರಥಮ, ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯ ಲಕ್ಷ್ಮಿ ಹುಲಿಕಟ್ಟಿ ದ್ವಿತೀಯ, ತೊಡುರ ಸರಕಾರಿ ಪ್ರೌಢಶಾಲೆಯ ವೈಷ್ಣವಿ ಆಚಾರಿ ತೃತೀಯ ಸ್ಥಾನ ಪಡೆದುಕೊಂಡರು. ಬಾಡ ಶಿವಾಜಿ ಬಾಲಕಿಯರ ಪ್ರೌಢಶಾಲೆಯ ಸುಪ್ರಿಯಾ ನಾಯ್ಕ, ಸೇಂಟ್ ಮೈಕೆಲ್ಸ್ ಕಾನ್ವೆಂಟ್ ಪ್ರೌಢಶಾಲೆಯ ದರ್ಶನಾ ಗೋಸಾವಿ, ಹಿಂದು ಪ್ರೌಢಶಾಲೆಯ ಪ್ರೇಮ ವೈದ್ಯ ಮತ್ತು ಸೇಂಟ್ ಮೈಕೆಲ್ಸ್ ಕಾನ್ವೆಂಟ್ ಪ್ರೌಢಶಾಲೆಯ ಅನಿಕಾ ಚಿಂಚನಕರ ಸಮಾಧಾನಕರ ಬಹುಮಾನ ಪಡೆದುಕೊಂಡರು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು.