ಜೊಯಿಡಾ: ತಾಲೂಕಿನ ಜಗಲಪೇಟ ವಲಯ ವ್ಯಾಪ್ತಿಯ ಶಿಂಗರಗಾoವ ಜಗಲಪೇಟ ರಸ್ತೆಯ ಪಕ್ಕದಲ್ಲಿನ ಕಾಡಿನಲ್ಲಿ ಚಿರತೆ ಸಾವನ್ನಪ್ಪಿದೆ. ಅರಣ್ಯ ಇಲಾಖೆಯಿಂದ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ.
ಬುಧವಾರ ರಾತ್ರಿ ಅಥವಾ ಗುರುವಾರ ಬೆಳಗ್ಗಿನ ಜಾವ ಈ ಘಟನೆ ಸಂಭವಿಸಿರಬಹುದಾಗಿದೆ. ಬೆಳಿಗ್ಗೆ ಜಗಲಪೇಟ ಶಿಂಗರಗಾoವ ಮಾರ್ಗದ ಮೂಲಕ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಂಚರಿಸುತಿದ್ದಾಗ ಮಂಗಗಳ ಕಿರುಚಾಟ ಕೇಳಿ ಕಾಡಿನಲ್ಲಿ ನೋಡಿದಾಗ ಚಿರತೆ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಸಿಕ್ಕಿದೆ.
ಜಗಲಪೇಟ ವಲಯ ಅರಣ್ಯಾಧಿಕಾರಿ ಚಂದ್ರಕಾoತ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ.ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.