Slide
Slide
Slide
previous arrow
next arrow

ಮೋದಿ ಸಾಂಪ್ರದಾಯಿಕ ಉಡುಗೆಗೆ ಟಿಎಂಸಿ ನಾಯಕನಿಂದ ಅವಮಾನ: ಭಾರೀ ಆಕ್ರೋಶ

300x250 AD

ಗುವಾಹಟಿ: ಮೇಘಾಲಯದ ಖಾಸಿ ಸಮುದಾಯದ ಸಾಂಪ್ರದಾಯಿಕ ಉಡುಗೆ ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತು ಟಿಎಂಸಿ ನಾಯಕ ಕೀರ್ತಿ ಆಜಾದ್ ನೀಡಿರುವ ಅವಹೇಳನಕಾರಿ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಟಿಎಂಸಿ ನಾಯಕ ಮತ್ತು ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಅವರು ಟ್ವಿಟ್‌ ಮಾಡಿ, ಈಶಾನ್ಯ ಕೌನ್ಸಿಲ್‌ನ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಲು ಡಿಸೆಂಬರ್ 18 ರಂದು ಇತ್ತೀಚೆಗೆ ಮೇಘಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ ಉಡುಪಿನ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.

ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್‌ನಲ್ಲಿ  ಸಾಂಪ್ರದಾಯಿಕ ಖಾಸಿ ಉಡುಪನ್ನು ಧರಿಸಿರುವ ಮಹಿಳೆಯ ಸ್ಕ್ರೀನ್‌ಶಾಟ್‌ ಅನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೇ ಮೋದಿಯನ್ನು ಗುರಿಯಾಗಿಸಿ, “ಗಂಡು ಅಥವಾ ಹೆಣ್ಣೂ ಅಲ್ಲ. ಫ್ಯಾಷನ್ ಆರಾಧಕ ಮಾತ್ರ. ಮಲ್ಟಿ ಫ್ಲೋರಲ್ ಎಂಬ್ರಾಯ್ಡರಿ ಡ್ರೆಸ್ ಅನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಖರೀದಿಸಬಹುದು” ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಪ್ರಧಾನಿ ಮೋದಿ ಮತ್ತು ಖಾಸಿ ಸಮುದಾಯದ ಉಡುಪುಗಳ ಬಗ್ಗೆ ಅವಹೇಳನಕಾರಿ ಹೇಳಿಕೆಗಾಗಿ ಆಜಾದ್ ಅವರಿಗೆ ತಿರುಗೇಟು ನೀಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅರುಣಾಚಲದ ಮುಖ್ಯಮಂತ್ರಿ ಪೆಮಾ ಖಂಡು, ಟಿಎಂಸಿ ನಾಯಕ ಮೇಘಾಲಯದ ಸಂಸ್ಕೃತಿ ಮತ್ತು ಬುಡಕಟ್ಟು ಬಟ್ಟೆಗಳನ್ನು ಅಗೌರವಿಸಿದ್ದಾರೆ ಎಂದು ಹೇಳಿದ್ದಾರೆ.

300x250 AD

ಸಿಎಂ ಶರ್ಮಾ ಟ್ವೀಟ್ ಮಾಡಿ, “ಕೀರ್ತಿ ಆಜಾದ್ ಮೇಘಾಲಯದ ಸಂಸ್ಕೃತಿಯನ್ನು ಯಾವ ರೀತಿ ಅಗೌರವಿಸುತ್ತಿದ್ದಾರೆ ಮತ್ತು ನಮ್ಮ ಬುಡಕಟ್ಟು ಜನಾಂಗದವರ ಉಡುಗೆಯನ್ನು ಯಾವ ರೀತಿ ಅಪಹಾಸ್ಯ ಮಾಡುತ್ತಿದ್ದಾರೆ ಎಂಬುದನ್ನು ನೋಡಿದರೆ ದುಃಖವಾಗುತ್ತದೆ” ಎಂದಿದ್ದಾರೆ.

ಆಜಾದ್ ಹೇಳಿಕೆಯನ್ನು ಖಂಡಿಸಿರುವ ಅರುಣಾಚಲ ಪ್ರದೇಶ ಸಿಎಂ ಪೇಮಾ ಖಂಡು, “ಪ್ರೀತಿಯ ಕೀರ್ತಿ ಆಜಾದ್  ಮೇಘಾಲಯದ ಶ್ರೀಮಂತ ಬುಡಕಟ್ಟು ಸಂಪ್ರದಾಯಗಳು ಮತ್ತು ನಮ್ಮ ಶ್ರೀಮಂತ ಬುಡಕಟ್ಟು ಪರಂಪರೆಯನ್ನು ನೀವು ಅಪಹಾಸ್ಯ ಮಾಡುತ್ತಿರುವುದು ಅವಹೇಳನಕಾರಿ ಮತ್ತು ಅಸಹ್ಯಕರವಾಗಿದೆ. ನಿಮ್ಮ ಭಾಷೆ ಹೆಣ್ಣಿನ ಘನತೆಗೆ ಧಕ್ಕೆ ತರುತ್ತಿದೆ. ನಾನು ಅದನ್ನು ಖಂಡಿಸುತ್ತೇನೆ” ಎಂದಿದ್ದಾರೆ.

ಕೃಪೆ:http://News13.in

Share This
300x250 AD
300x250 AD
300x250 AD
Back to top