Slide
Slide
Slide
previous arrow
next arrow

ಕಾಡು ಹಂದಿಗಳಿಂದ ಅಡಿಕೆ ಗಿಡ ನಾಶ: ರೈತರಿಗೆ ಹಾನಿ

300x250 AD

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಯಲ್ಲಿ ಬೆಳೆದು ನಿಂತ ಸುಮಾರು 2- 3 ವರ್ಷದ ಅಡಿಕೆ ಗಿಡಗಳನ್ನು ಕಾಡು ಹಂದಿಗಳು ಬೇರು ಸಮೇತ ಕಿತ್ತೆಸೆದು ತಿಂದು ಹಾಕಿದ್ದರಿಂದ ರೈತರಿಗೆ ಅಪಾರವಾದ ಹಾನಿ ಉಂಟಾಗಿದೆ.

ಈ ಕುರಿತು ರೈತ ಭೀಮಣ್ಣಾ ಬೈರಣ್ಣನವರ ಕಾಡು ಹಂದಿಗಳಿಂದ ಅರಣ್ಯ ಇಲಾಖೆಯವರು ಶಾಶ್ವತವಾದ ರಕ್ಷಣೆ ಒದಗಿಸಿ, ಪರಿಹಾರ ನೀಡಬೇಕೆಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಒಂದು ವರ್ಷದಿಂದ ಕಾಡುಹಂದಿಗಳು ಶಿವಲಿಂಗಯ್ಯ ಕಳಸಗೇರಿ ರೈತನ ಹೊಲದಲ್ಲಿ 138 ಅಡಿಕೆ ಗಿಡ, ಚಿನ್ನಯ್ಯ ಹಿರೇಮಠ ಹೊಲದಲ್ಲಿ 170, ಗಜೇಂದ್ರ ಮಟ್ಟಿಮನಿ ತೋಟದಲ್ಲಿಯ 50, ಗಣೇಶ ಹೆಗಡೆ ತೋಟದ 125, ಬಸಯ್ಯ ಕಳಸಗೇರಿಯ 48 ಅಡಿಕೆ ಗಿಡಗಳನ್ನ ನಾಶಪಡಿಸಿದೆ. ಹೀಗಾಗಿ ಸ್ಥಳ ಪರಿಶೀಲಿಸಿ ಶಾಶ್ವತ ಪರಿಹಾರ ಕಲ್ಪಿಸಿಕೊಟ್ಟು ರೈತರಿಗೆ ಹಾನಿಯಾಗುವುದನ್ನು ತಪ್ಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

300x250 AD

ಈ ಸಂದರ್ಭದಲ್ಲಿ ರೈತರಾದ ಗುಡದಯ್ಯ ಕಳಸಗೇರಿ, ನಾಗರಾಜ ಗುಬ್ಬಕ್ಕನವರ, ಮಂಜುನಾಥ ಕೋಣನಕೇರಿ, ಗೌರೀಶ ಹರಿಜನ ಇದ್ದರು.

Share This
300x250 AD
300x250 AD
300x250 AD
Back to top