Slide
Slide
Slide
previous arrow
next arrow

ಡಿ.19 ರಂದು ಹೆಸ್ಕಾಂ ಜನಜಾಗೃತಿ ಸಭೆ

300x250 AD

ಕಾರವಾರ: ವಿದ್ಯುತ್ ಸರಬರಾಜು ಕಂಪನಿಯಿAದ ವಿದ್ಯುತ್ ಬಳಕೆಯಲ್ಲಿನ ಸುರಕ್ಷತೆಯ ಬಗ್ಗೆ ಸಲಹೆಗಳು, ಇಂಧನ ದಕ್ಷತೆ ಮತ್ತು ವಿದ್ಯುತ್ ಉಳಿತಾಯದ ಅಂಗವಾಗಿ ಎಲ್.ಇ.ಡಿ ಬಳಕೆಯ ಪ್ರಯೋಜನಗಳು, ಸೌರಶಕ್ತಿಯ ಬಳಕೆ, ಕೇಂದ್ರ ಸರ್ಕಾರದ ಸೌರ ಮೇಚ್ಚಾವಣಿ ಯೋಜನೆ ಹಂತ-2, ಪ್ರಧಾನಮಂತ್ರಿ ಕಿಸಾನ್ ಸುರಕ್ಷಾ ಎವಂ ಉತ್ತಾಣ ಮಹಾಭಿಯಾನ (ಪಿ.ಎಮ್-ಕುಸುಮ), ಇವಿ ಚಾರ್ಜಿಂಗ್ ಸೆಂಟರ್ ಇತ್ಯಾದಿಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿಯನ್ನು ಮೂಡಿಸಲು ಜನಜಾಗೃತಿ ಸಭೆಯನ್ನು ಡಿಸೆಂಬರ್ 19 ರಂದು ಜಿಲ್ಲಾ ರಂಗ ಮಂದಿರದಲ್ಲಿ (ಕೋಡಿಭಾಗ,ಕಾಜುಭಾಗ,ನಂದನಗಾ, ಸರ್ವೋದಯನಗರ, ವಿವೇಕಾನಂದನಗರ ಸಾರ್ವಜನಿಕರು), ಡಿಸೆಂಬರ್ 20 ರಂದು ಜಿಲ್ಲಾ ರಂಗ ಮಂದಿರದಲ್ಲಿ (ಹಬ್ಬುವಾಡಾ, ಕೆ.ಎಚ್.ಬಿ. ಕಾಲೋನಿ, ತೆಲಂಗರೋಡ, ಸುಂಕೇರಿ, ಬೈತಖೋಲ, ಬಾಂಡಿಶಿಟ್ಟಾ, ಪ್ರದೇಶಗಳ ಸಾರ್ವಜನಿಕರು), ಡಿಸೆಂಬರ್ 21 ರಂದು ಜಿಲ್ಲಾ ರಂಗ ಮಂದಿರದಲ್ಲಿ (ಅಮದಳ್ಳಿ, ಚೆಂಡಿಯಾ, ಬಿಣಗಾ, ಶಿರವಾಡ, ಕಡವಾಡ, ಕಿನ್ನರ, ಸಿದ್ದರ, ಮಲ್ಲಾರ ಪ್ರದೇಶಗಳ ಸಾರ್ವಜನಿಕರು) ಹಾಗೂ ಡಿಸೆಂಬರ್ 22 ರಂದು ಗೋಲ್ಡನ್ ಜುಬಿಲಿ ಹಾಲ್ ಸದಾಶಿವಗಡ (ಸದಾಶಿವಗಡ, ಮಾಜಾಳಿ, ಹಳಗಾ, ಉಳಗಾ, ಆಸ್ಫೋಟ, ಹಣಕೋಣ, ಕದ್ರಾ, ಗೋಟೆಗಾಳಿ ಪ್ರದೇಶಗಳ ಸಾರ್ವಜನಿಕರು) ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್(ವಿ), ಕಾರ್ಯ ಮತ್ತು ಪಾಲನೆ ವಿಭಾಗ ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top