ದಾಂಡೇಲಿ: ನಗರದ ಬಂಗೂರನಗರದ ಪದವಿ ಮಹಾ ವಿದ್ಯಾಲಯದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ, ಮಾನವ ಹಕ್ಕುಗಳ ಸಂಘ ಮತ್ತು ಮತದಾರರ ಸಾಕ್ಷರತಾ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ನಗರದ ಸಿವಿಲ್ ನ್ಯಾಯಾಯಲದ ನ್ಯಾಯಾಧೀಶರಾದ ರೋಹಿಣಿ ಡಿ.ಬಸಾಪುರ ಅವರು ನಮ್ಮ ದೇಶದ ಸಂವಿಧಾನ ವಿಶ್ವಮಾಮಾನ್ಯತೆಯನ್ನು ಪಡೆದುಕೊಂಡಿದೆ. ಈ ದೇಶದ ಪ್ರತಿಯೊಬ್ಬರಿಗೂ ಬದುಕುವ ಹಕ್ಕನ್ನು ನಮ್ಮ ಸಂವಿಧಾನ ಒದಗಿಸಿದೆ. ಸಂವಿಧಾಯದ ಆಶಯ ಮತ್ತು ಧ್ಯೇಯೋದ್ದೇಶಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕೆಂದರು. ನಮ್ಮ ರಾಷ್ಟ್ರದ ಮೂಲಭೂತ ಕಾನೂನುಗಳ ಸಮಗ್ರವಾದ ಜ್ಞಾನವನ್ನು ಬೆಳೆಸಿಕೊಂಡರೆ ಸುಸಂಸ್ಕೃತ ನಾಗರಿಕನಾಗಿ ಸಮಾಜಕ್ಕೆ ಆಸ್ತಿಯಾಗುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಹಿರಿಯ ವಕೀಲ ಎಸ್.ಎಂ.ದಬಗಾರ ಮತ್ತು ಎಸ್.ಸೋಮಕುಮಾರ್ ಅವರು ಕಾನೂನು ಮಾಹಿತಿ ನೀಡಿದರು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಆರ್.ಜಿ.ಹೆಗಡೆಯವರು ವಹಿಸಿ ಕಾನೂನನ್ನು ಗೌರವಿಸುವವನು ಸದೃಢ ಸಮಾಜ ನಿರ್ಮಾಣಕ್ಕೆ ನೆರವಾಗಬಲ್ಲರು ಎಂದರು.
ವೇದಿಕೆಯಲ್ಲಿ ವಕೀಲರ ಸಂಘದ ಕಾರ್ಯದರ್ಶಿ ವಿಶ್ವನಾಥ ಲಕ್ಷಟ್ಟಿ, ಹಿರಿಯ ವಕೀಲ ಎಂ.ಸಿ.ಹೆಗಡೆ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಭಾಷಣ ಸ್ಪರ್ಧೆ ಮತ್ತು ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯ ನಿರ್ಣಾಯಕರಾಗಿ ನ್ಯಾಯಾಧೀಶರಾದ ರೋಹಿಣಿ ಡಿ.ಬಸಾಪುರ ಅವರು ಭಾಗವಹಿಸಿ ಗಮನ ಸೆಳೆದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ರೂಪಾ ಗಜ್ಜಾ ಪ್ರಾರ್ಥಿಸಿದರು. ಪ್ರೊ.ಎಸ್.ಎಸ್.ಹಿರೇಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಡಾ.ತೃಪ್ತಿ ನಾಯಕ ವಂದಿಸಿದರು. ನಿಶಾ ಬೆಳ್ಳಿಗಟ್ಟಿ ಮತ್ತು ಅನಿರುದ್ಧ್ ಕಾರ್ಯಕ್ರಮ ನಿರೂಪಿಸಿದರು. ಡಾ.ಬಿ.ಎಲ್.ಗುಂಡೂರ್ ಸಹಕರಿಸಿದರು.