ಕಾರವಾರ: ಗುಜರಾತ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿರುವುದಕ್ಕೆ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್.ನಾಯ್ಕ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಜೀ ಅವರ ವರ್ಚಸ್ಸು, ಆಡಳಿತ, ಗುಜರಾತ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳು, ಭಾರತೀಯ ಜನತಾ ಪಕ್ಷದ ಜನಪರ ಆಡಳಿತವನ್ನು ಗಮನಿಸಿ ಮತದಾರರು ಬಿಜೆಪಿಗೆ ಭಾರಿ ವಿಜಯ ತಂದುಕೊಟ್ಟಿದ್ದಾರೆ. ಈ ಫಲಿತಾಂಶ ನಮ್ಮ ರಾಜ್ಯದ ಚುನಾವಣೆಯ ಮೇಲೂ ಪ್ರಭಾವ ಬೀರಲಿದೆ. ರಾಜ್ಯದ ಬಿಜೆಪಿಯಲ್ಲೂ ಹೊಸ ಉತ್ಸಾಹ ಬಂದ0ತಾಗಿದೆ. ಗುಜರಾತ ಚುನಾವಣೆಯಲ್ಲಿ ಗೆಲುವಿಗೆ ಕಾರಣರಾದ ಎಲ್ಲರನ್ನೂ ಅಭಿನಂದಿಸುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.