Slide
Slide
Slide
previous arrow
next arrow

ರೋಟರಿಯಿಂದ ಉಚಿತ ಶ್ರವಣ ಸಾಧನ ವಿತರಣೆ

300x250 AD

ದಾಂಡೇಲಿ: ನಗರ ಹಾಗೂ ಬೆಳಗಾವಿಯ ವೇನುಗ್ರಾಮದ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ಯುಕೆಯ ಬರ್ನಿಂಗ್ ಹ್ಯಾಮ್ ಕ್ಲಬ್ ಮತ್ತು ಜಿಲ್ಲಾಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಿವಿ, ಗಂಟಲು ಮತ್ತು ಮೂಗು ತಪಾಸಣಾ ಶಿಬಿರದಲ್ಲಿ ಆಯ್ಕೆ ಮಾಡಲಾಗಿದ್ದ ಒಟ್ಟು 54 ಅರ್ಹ ಫಲಾನುಭವಿಗಳಿಗೆ ನಗರದ ರೋಟರಿ ಶಾಲೆಯ ಸಭಾಭವನದಲ್ಲಿ ಸೋಮವಾರ ಶ್ರವಣ ಸಾಧನಗಳನ್ನು ವಿತರಿಸಲಾಯಿತು.
ಶಿಬಿರವನ್ನು ಬೆಳಗಾವಿಯ ವೇನುಗ್ರಾಮದ ರೋಟರಿ ಕ್ಲಬಿನ ಅಧ್ಯಕ್ಷ ಉಮೇಶ ಉದ್ಘಾಟಿಸಿ ಮಾತನಾಡುತ್ತಾ, ಸದೃಢ ಆರೋಗ್ಯವೆ ಯಶಸ್ವಿ ಜೀವನಕ್ಕೆ ಭದ್ರ ಬುನಾದಿ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಮತ್ತು ಇನ್ನರ್ ವ್ಹೀಲ್ ಕ್ಲಬ್ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿ ಕಾರ್ಯ ನಿರ್ವಹಿಸುತ್ತಾ ಬಂದಿದೆ ಎಂದರು.
ಶ್ರವಣ ಸಾಧನದ ತಾಂತ್ರಿಕ ಮುಖ್ಯಸ್ಥ ಕಿಶೋರ್ ಜಗದಾಳೆಯವರು ಶ್ರವಣ ಸಾಧನದ ಬಳಕೆ ಹೇಗೆ, ಯಾಕೆ ಎನ್ನುವುದರ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ರೋಟರಿ ಕ್ಲಬಿನ ಹಿರಿಯ ಸದಸ್ಯರಾಸದ ಆರ್.ಪಿ.ನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬಿನ ಜಿಲ್ಲಾ ಉಪ ಪ್ರಾಂತಪಾಲರಾದ ಎಸ್.ಪ್ರಕಾಶ್ ಶೆಟ್ಟಿ, ರೋಟರಿ ಕ್ಲಬಿನ ಅಧ್ಯಕ್ಷರಾದ ಸುಧಾಕರ ಶೆಟ್ಟಿ, ಕಾರ್ಯದರ್ಶಿ ಜೋಸೆಫ್ ಗೋನ್ಸಾಲಿಸ್ ಮುಂತಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top