• Slide
  Slide
  Slide
  previous arrow
  next arrow
 • ಡಿ. 6ಕ್ಕೆ ತ್ಯಾಗಲಿಯಲ್ಲಿ ‘ಪಂಚವಟಿ ತಾಳಮದ್ದಲೆ’

  300x250 AD

  ಸಿದ್ದಾಪುರ: ತಾಲೂಕಿನ ತ್ಯಾಗಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸಭಾಭವನದಲ್ಲಿ ಸೇವಾರತ್ನಾ ಮಾಹಿತಿ ಕೇಂದ್ರ, ಕಾನಸೂರು ಇವರಿಂದ ‘ಪಂಚವಟಿ ತಾಳಮದ್ದಲೆ’ ಕಾರ್ಯಕ್ರಮವು  ಡಿ.06, ಮಂಗಳವಾರ ಮಧ್ಯಾಹ್ನ 3.30 ರಿಂದ ಆಯೋಜನೆಗೊಂಡಿದೆ.

  ಕಾರ್ಯಕ್ರಮದಲ್ಲಿ ಶ್ರೀಮತಿ ಸರಸ್ವತಿ ಹೆಗಡೆ, ಬೆಂಗಳೂರು ಇವರು ನೀಡಿರುವ ಧ್ವನಿವರ್ಧಕದ ಉದ್ಘಾಟನೆಯೂ ನಡೆಯಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ ಆಡಳಿತ ಸೇವಾ ಸಮಿತಿ ತ್ಯಾಗಲಿಯ ಮೊಕ್ತೇಸರರಾದ ವಿ. ಎಂ. ಹೆಗಡೆ ತ್ಯಾಗಲಿ ವಹಿಸಲಿದ್ದು, ಉದ್ಘಾಟಕರಾಗಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಕೃಷ್ಣ ಪದಕಿ ಆಗಮಿಸಲಿದ್ದಾರೆ.

  300x250 AD

  ನಂತರದ ತಾಳಮದ್ದಲೆಯಲ್ಲಿ ಭಾಗವತರಾಗಿ ಶ್ರೀಧರ ಹೆಗಡೆ, ಹಣಗಾರು ಮೃದಂಗದಲ್ಲಿ ಶ್ರೀಪತಿ ಹೆಗಡೆ ಕಂಚಿಮನೆ, ಅರ್ಥಧಾರಿಗಳಾಗಿ ರಾಧಾಕೃಷ್ಣ ಭಟ್ ಸೂರನಕೇರಿ,ಸುಬ್ರಾಯ ಹೆಗಡೆ ಕೆರಕೊಪ್ಪ, ಗಣಪತಿ ಭಟ್ಟ ವರ್ಗಾಸರ, ರತ್ನಾಕರ ಭಟ್ಟ ಕಾನಸೂರು, ಕುಮಾರ ಆನಂದ ಶೀಗೆಹಳ್ಳಿ, ಚಂದ್ರಶೇಖರ ಹೆಗಡೆ ಮಾದ್ನಕಳ್ ಭಾಗವಹಿಸಲಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top