Slide
Slide
Slide
previous arrow
next arrow

ವಿಕಲಚೇತನರಿಗೆ ಅವಕಾಶ ಕಲ್ಪಿಸಬೇಕು: ನ್ಯಾ.ತಿಮ್ಮಯ್ಯ

300x250 AD

ಸಿದ್ದಾಪುರ: ವಿಕಲಚೇತನ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ ಹಾಗೂ ಉತ್ತಮ ಶಿಕ್ಷಣ ನೀಡಿದರೆ ಅವರೂ ಸಹ ಸಮಾಜದ ಮುಖ್ಯವಾಹಿನಿಗೆ ಬರುತ್ತಾರೆ. ಅವರ ಬದುಕು ಹಸನಾಗುತ್ತದೆ ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ. ಹೇಳಿ, ಕವಿ ಜಿ.ಆರ್. ಲಕ್ಷ್ಮಣ್ ರಾವ್ ಅವರ ವಿರಚಿತ ಗೀತೆಯನ್ನು ಹಾಡಿ ಮಕ್ಕಳಿಗೆ ಶುಭ ಕೋರಿದರು.
ಗಿಡಗಳನ್ನು ನೆಡುವುದರ ಮೂಲಕ ಸ್ಥಳೀಯ ಜೆ.ಎಂ.ಆರ್. ಅಂಧಮಕ್ಕಳ ವಸತಿ ಶಾಲಾ ಸಭಾಭವನದಲ್ಲಿ ವಿಶ್ವ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲ ರವಿಕುಮಾರ ನಾಯ್ಕ ಮಾತನಾಡಿ, ಅಂಗವಿಕಲರು ಸಮಾಜದಲ್ಲಿ ದುರ್ಬಲರಲ್ಲ. ಅವರಿಗೆ ಕಾನೂನು ರೀತಿಯ ಅವಕಾಶ ನೀಡಬೇಕು. ಪ್ರೀತಿ ವಿಶ್ವಾಸದಿಂದ ನೋಡಬೇಕು ಎಂದರು. ಆಶಾಕಿರಣ ಟ್ರಸ್ಟ್ ಉಪಾಧ್ಯಕ್ಷ ಸಿ.ಎಸ್. ಗೌಡರ್ ಹೆಗ್ಗೋಡಮನೆ ಅವರು ಮಾತನಾಡಿದರು.
ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಅಂಗವಿಕಲರ ಶಿಕ್ಷಣ ಹಾಗೂ ಸೌಲಭ್ಯಗಳ ಕುರಿತು ಮಾತನಾಡಿದರು. ಸಂಸ್ಥೆಯ ಕೋಶಾಧ್ಯಕ್ಷ ನಾಗರಾಜ ಎಂ.ದೋಶೆಟ್ಟಿ ವೇದಿಕೆಯಲ್ಲಿದ್ದರು. ಅಧ್ಯಕ್ಷತೆಯನ್ನು ಆಶಾಕಿರಣ ಟ್ರಸ್ಟ್ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನಮನೆ ವಹಿಸಿ, ತಮ್ಮ ಶಾಲೆಯಲ್ಲಿ ಅಂಧಮಕ್ಕಳಿಗಾಗಿ ಎಲ್ಲ ಸೌಲಭ್ಯ ಕಲ್ಪಿಸಿದ್ದು, ಪರಿಸರ ಕಾಳಜಿ, ಸಾಂಸ್ಕೃತಿಕ ಕಾಳಜಿ ಹಾಗೂ ಸಮಾಜಮುಖಿ ವ್ಯಕ್ತಿತ್ವದ ಬೆಳವಣಿಗೆಗೆ ಮಕ್ಕಳಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದರು.
ಅ0ಧ ನೌಕರ ಮಂಜುನಾಥ ಕೆ., ಅಂಗವಿಕಲರು ಮತ್ತು ಅವಕಾಶ ಹಾಗೂ ಸಾಧನೆ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಸ್ವಾಗತಿಸಿದರು. ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಶಿಕ್ಷಕಿ ಗೀತ ಎಚ್.ವಿ. ವಂದಿಸಿದರು. ಲತಾ ಮಡಿವಾಳ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top