ಸಿದ್ದಾಪುರ: ನಾನು ಜೆಡಿಎಸ್ ಪಕ್ಷದಲ್ಲಿ ಎಂಟು ವರ್ಷಗಳ ಕಾಲ ಅಧ್ಯಕ್ಷನಾಗಿ ಹಾಗೂ ಎರಡು ವರ್ಷ ಕಾರ್ಯಾಧ್ಯಕ್ಷನಾಗಿ 10 ವರ್ಷಗಳ ಕಾಲ ಜೆಡಿಎಸ್ಗಾಗಿ ದುಡಿದಿದ್ದೇನೆ. ಹತ್ತು ವರ್ಷದಲ್ಲಿ ಜೆಡಿಎಸ್ ಪಕ್ಷದಿಂದ ನನಗೆ ಯಾರೂ 10 ರೂಪಾಯಿ ಕೊಟ್ಟಿಲ್ಲ ಎಂದು ಜೆಡಿಎಸ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ ಹೆಗ್ಗಾರಕೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಜೆಡಿಎಸ್ ಪಕ್ಷದಲ್ಲಿದ್ದಾಗ ಏನೇನು ಕಷ್ಟಗಳನ್ನು ಅನುಭವಿಸಿದ್ದೇವೆ. ಅಷ್ಟೊಂದು ಕಷ್ಟಗಳನ್ನು ಅನುಭವಿಸಿಯು ನಾವು ನಿಷ್ಠೆಯಿಂದ ದುಡಿದಿದ್ದೇವೆ. ನನ್ನ ಜೊತೆಗೆ ಬಂಗಾರಪ್ಪನವರ ಅನುಯಾಯಿಗಳಾಗಿದ್ದ ಹೆಚ್ಚಿನ ಜನರು ಈಗ ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿಲ್ಲ. ಆದರೂ ಸಹ ಅವರಿಗೆಲ್ಲ ಒಂದೊ0ದು ಮತ ಇದೆ. ಅವರು ಆ ಮತವನ್ನು ಕಾಂಗ್ರೆಸ್ ಪರವಾಗಿ ಚಲಾಯಿಸುತ್ತಾರೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಮಧು ಬಂಗಾರಪ್ಪ ನವರಿಗೆ ಶಕ್ತಿ ತುಂಬಬೇಕೆ0ಬ ಉದ್ದೇಶದಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ನಿಕಟಪೂರ್ವ ಅಧ್ಯಕ್ಷ ಎಸ್.ಕೆ.ನಾಯ್ಕ ಕಡಕೇರಿ, ವಕೀಲರಾದ ಎಂ.ಡಿ.ನಾಯ್ಕ, ಪ್ರಮುಖರಾದ ಎನ್.ಟಿ.ನಾಯ್ಕ, ತಿಮ್ಮಪ್ಪ ನಾಯ್ಕ, ಅಬ್ದುಲ್ ರಶೀದ್, ಎಂ.ಆರ್.ನಾಯ್ಕ, ಗೋಪಾಲ್ ನಾಯ್ಕ ಮಳವಳ್ಳಿ ಉಪಸ್ಥಿತರಿದ್ದರು.
ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರಿದೆ ಹೋದಲ್ಲಿ ಈ ಜಿಲ್ಲೆಯಲ್ಲಿ ಬಂಗಾರಪ್ಪನವರ ಸಂದೇಶ ಏನು ಎಂಬುದರ ಬಗ್ಗೆ ಜನ ಗೊಂದಲದಲ್ಲಿ ಬೀಳುತ್ತಾರೆ.ಈ ವಿಚಾರದ ಮೇರೆಗೆ ಬಂಗಾರಪ್ಪನವರ ಅನುಯಾಯಿಗಳಿಗೆ ಒಂದು ಸಂದೇಶ ಹೋಗಲಿ ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ.
• ಬಿ.ಆರ್.ನಾಯ್ಕ ಹೆಗ್ಗಾರಕೈ, ನಿಕಟಪೂರ್ವ ಜಿಲ್ಲಾಧ್ಯಕ್ಷ