ಉಡುಪಿ:
ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಆತಂಕಕಾರಿ ಬೆಳವಣಿಗೆಗಳು ಹೆಚ್ಚುತ್ತಿದ್ದು ಜನರು ಈ ಕುರಿತು ಜಾಗೃತವಾಗಿರಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ ದಿಂದಾಗಿ ಕರಾವಳಿಯಲ್ಲಿ ಉಗ್ರರು ವ್ಯಾಪಿಸಿರುವುದು ಬಯಲಾಗಿದೆ. ಹಿಂದೂ ಸಂಕೇತ ಬಳಸಿ ಉಗ್ರಕೃತ್ಯ ಮಾಡುತ್ತಿರುವುದು ನೋಡುತ್ತಿದ್ದೇವೆ. ಸಮಾಜದಲ್ಲಿ ದುಷ್ಕೃತ್ಯವೆಸಗಿ ಅದನ್ನು ಹಿಂದೂ ಸಮಾಜದ ಮೇಲೆ ಹೇರಲು ಯತ್ನಿಸಲಾಗುತ್ತಿದೆ. ಹೀಗಾಗಿ ಯಾರಾದರೂ ಮೊಬೈಲ್ ಇತ್ಯಾದಿ ದಾಖಲೆಗಳು ಕಳೆದು ಹೋದರೆ ತಕ್ಷಣವೇ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿ. ಇಲ್ಲದಿದ್ದರೆ ಸಂದೇಹಕ್ಕೆ ಕಾರಣವಾಗುತ್ತದೆ.
ಕರಾವಳಿ ಭಾಗದಲ್ಲಿ ಯಕ್ಷಗಾನ, ಕೋಲ, ನಾಗಮಂಡಲ, ಕಂಬಳ, ದೀಪೋತ್ಸವ ಹೀಗೆ ಹಲವಾರು ಉತ್ಸವಗಳು ನಡೆಯುತ್ತಿರುತ್ತವೆ. ಇಲ್ಲಿ ಹೆಚ್ಚಿನ ಜನರು ಸೇರುತ್ತಾರೆ. ಇಂಥ ಸಂದರ್ಭದಲ್ಲಿ ದಾಳಿ ನಡೆದರೆ ಸಮಾಜಕ್ಕೆ ದೊಡ್ಡ ಹಾನಿ. ಹಾಗಾಗಿ ಎಲ್ಲರೂ ಜಾಗೃತವಾಗಿರಬೇಕು ಎಂದು ಸ್ವಾಮೀಜಿಯವರು ಎಚ್ಚರಿಸಿದ್ದಾರೆ