ದಾಂಡೇಲಿ: ಸಂದೇಶ್ ನ್ಯೂಸ್ ಆಶ್ರಯದಡಿ ದಾಂಡೇಲಿ ಬ್ಯಾಡ್ಮಿಂಟನ್ ಅಸೋಸಿಯೇಶನ್ ಸಹಭಾಗಿತ್ವದಡಿ ಇದೇ ಬರುವ ಡಿ.03 ಮತ್ತು 4ರಂದು ನಗರದ ಸುಭಾಷನಗರದಲ್ಲಿರುವ ಒಳ ಕ್ರೀಡಾಂಗಣದಲ್ಲಿ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಪಂದ್ಯಾವಳಿಯ ಸಂಘಟಕ ಸಂದೇಶ್ ಎಸ್.ಜೈನ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಡಿ.03ರಂದು ಮಧ್ಯಾಹ್ನ 2 ಗಂಟೆಯಿ0ದ ದಾಂಡೇಲಿ- ಹಳಿಯಾಳ ಮತ್ತು ಜೊಯಿಡಾ ವಿಧಾನಸಭಾ ಕ್ಷೇತ್ರ ಮಟ್ಟದ ಮುಕ್ತ ಸಿಂಗಲ್ಸ್ ಮತ್ತು ಮುಕ್ತ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಲಿದೆ. ಡಿ.04ರಂದು ಬೆಳಿಗ್ಗೆ 9 ಗಂಟೆಯಿ0ದ ಜಿಲ್ಲಾ ಮಟ್ಟದ ಮುಕ್ತ ಸತಿ-ಪತಿ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ನ.30ರೊಳಗೆ ನವೀನ್ ಕಾಮತ್ (ಮೊ.ಸಂ: 9591618850) ಅಥವಾ ಸಂದೇಶ್ ಎಸ್.ಜೈನ್ (ಮೊ.ಸಂ: 9620595555, 9081966555) ಅವರನ್ನು ಸಂಪರ್ಕಿಸಬೇಕೆ0ದು ತಿಳಿಸಿದ್ದಾರೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಕ್ಕೆ ಪ್ರವೇಶ ಶುಲ್ಕ ರೂ.300/- ನಿಗದಿಗೊಳಿಸಲಾಗಿದೆ. ಸತಿ-ಪತಿ ಮತ್ತು ಡಬಲ್ಸ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನ ರೂ.5555 ನಗದು ಮತ್ತು ಶಾಶ್ವತ ಫಲಕ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.3333 ನಗದು ಮತ್ತು ಶಾಶ್ವತ ಫಲಕ ಹಾಗೂ ಸಿಂಗಲ್ಸ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ ಬಹುಮಾನ ರೂ.3333 ನಗದು ಮತ್ತು ಶಾಶ್ವತ ಫಲಕ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.2222 ನಗದು ಮತ್ತು ಶಾಶ್ವತ ಫಲಕವನ್ನು ನೀಡಲಾಗುವುದು.
ಸತಿ-ಪತಿ ಪಂದ್ಯಾವಳಿ ಮನೋರಂಜನೆಯ ದೃಷ್ಟಿಯಿಂದ ಆಯೋಜಿಸಲಾಗಿದ್ದು, ಈ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿದೆಡೆಗಳ ತಂಡಗಳು ಭಾಗವಹಿಸಿ, ಪಂದ್ಯಾವಳಿಯ ಮೆರುಗನ್ನು ಹೆಚ್ಚಿಸಲಿವೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಆಯೋಜಿಸಲಾಗಿದೆ. ವಿಶಿಷ್ಟವಾದ ಈ ಪಂದ್ಯಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿ ಪಂದ್ಯಾವಳಿಯನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಂದ್ಯಾವಳಿಯ ಸಂಘಟಕರುಗಳಾದ ನವೀನ್ ಕಾಮತ್, ವಿಷ್ಣುಮೂರ್ತಿ ರಾವ್ ಮತ್ತು ಯಹೋನ್ ಎಗ್ಗೋನಿ ಇದ್ದರು.