ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಹಾಗೂ ಬೆಳಗಾವಿ ವಿಭಾಗ ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ ,ಯೋಗ, ಚೆಸ್ ವಿಭಾಗದಲ್ಲಿ ಶ್ರೀಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಾರ್ತಿಕ್ ಪೂಜಾರಿ ಜಾವೆಲಿನ್- ಪ್ರಥಮ, ವರುಣ್ ಮಡಿವಾಳ ಹ್ಯಾಮರ್ ಎಸೆತ -ದ್ವಿತೀಯ, ಗಗನ್ ದೇವಾಡಿಗ 800 ಮೀಟರ್ಸ ಓಟದಲ್ಲಿ ದ್ವಿತೀಯ, ಚಿನ್ಮಯ್ ಜೋಗಳೇಕರ್ ಗುಂಡು ಎಸೆತ ಪ್ರಥಮ, ಭಾವನಾ ಜಿ ಹೆಗಡೆ 100, 200 ಓಟದಲ್ಲಿ ದ್ವಿತೀಯ, ನಾಗಶ್ರೀ ದೇವಾಡಿಗ 3000 ಮೀಟರ್ಸ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಭುವನ್ ಭಟ್ ಚೆಸ್ ದಲ್ಲಿ ಪ್ರಥಮ, ಸಿಂಚನ ಕಿರಣ ಪಂಡಿತ್ ಯೋಗಾಸನದಲ್ಲಿ ಪ್ರಥಮ, ನಾಗವೇಣಿ ಎತ್ತರ ಜಿಗಿತ ತೃತೀಯ, ಬಾಲಕರ ರಿಲೇ ಹಾಗೂ ಬಾಲಕಿಯರ ರಿಲೇ ದ್ವಿತೀಯ ಸ್ಥಾನ ಪಡೆದಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕರಾದ ಎ ಪಿ ಶ್ರೀನಿವಾಸ್, ಉದಯ ಶಿರಹಟ್ಟಿ ಮತ್ತು ಯಮುನಾ ನಾಯಕ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪಾಧ್ಯಕ್ಷ ಆರ್ ಡಿ ಹೆಗಡೆ ಜಾನ್ಮನೆ ಹಾಗೂ ಸದಸ್ಯರು, ಡಿ ಡಿ ಪಿ ಐ ಬಸವರಾಜ್, ಬಿಇಓ ಎಂ ಎಸ್ ಹೆಗಡೆ, ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿಗಳು ವಸಂತ್ ಭಂಡಾರಿ ಹಾಗೂ ಪ್ರಭಾರೆ ಉಪಪ್ರಾಚಾರ್ಯರಾದ ರಾಜೇಶ್ ವಿ ನಾಯ್ಕ ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.