ಅಂಕೋಲಾ: ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಕ್ ಮೌಲ್ಯಮಾಪನದಲ್ಲಿ ಧಾರವಾಡದ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬಿ++ ಶ್ರೇಣಿ ಪಡೆಯುವುದರೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದೆ.
ನ.17, 18ರಂದು ಕಾಲೇಜಿಗೆ ನ್ಯಾಕ್ ತಂಡ ಆಗಮಿಸಿ 2ನೇ ಸುತ್ತಿನ ಮೌಲ್ಯಾಂಕದಲ್ಲಿ ಕಾಲೇಜು 2.99 ಅಂಕ ಗಳಿಸಿತ್ತು. ಧಾರವಾಡ ವಲಯದಲ್ಲಿ 2007ರ ನಂತರ ಪ್ರಾರಂಭವಾದ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಂಕೋಲಾ ಪ್ರಥಮ ಸ್ಥಾನ ಪಡೆದಿರುವುದಕ್ಕೆ ಪ್ರಾಚಾರ್ಯರು, ಭೋದಕ-ಭೋದಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಲಕರು, ಹಳೆಯ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ವಿವಿ ವ್ಯಾಪ್ತಿಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಥಮ
