Slide
Slide
Slide
previous arrow
next arrow

ಲಯನ್ಸ್ ಶಾಲೆಯಲ್ಲಿ ಕ್ವೆಸ್ಟ್ ವಿದ್ಯಾರ್ಥಿಗಳಿಂದ ಕಾರ್ಯಕ್ರಮ

300x250 AD

ಶಿರಸಿ: ಲಯನ್ಸ್ ಕ್ವೆಸ್ಟ್ ಕಾರ್ಯಕ್ರಮದಡಿ ಹಲವಾರು ಕಾರ್ಯಕ್ರಮಗಳು ಇತ್ತೀಚೆಗೆ ಜರುಗಿದವು. ಲಯನ್ಸ್ ಶಾಲೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ವಸ್ತು ಪ್ರದರ್ಶನವನ್ನು ಒಂದನೇ ಉಪ ಜಿಲ್ಲಾ ಗವರ್ನರ್ ಅರ್ಲ ಬ್ರಿಟೊ ಉದ್ಘಾಟಿಸಿದರು. ಹದಿಹರೆಯದ ಮಕ್ಕಳಿಗಾಗಿ ಕೌಶಲ್ಯಗಳನ್ನು ಹೇಳಿಕೊಡುವ ಕ್ವೆಸ್ಟ್ ಸಂಬಂಧಿಸಿದಂತೆ ಹಲವಾರು ಭಿತ್ತಿಪತ್ರಗಳನ್ನು ಮಾಡಿ ಪ್ರದರ್ಶಿಸಿದರು. ಯಶಸ್ಸಿನ ಮೆಟ್ಟಿಲುಗಳು, ಪುಟ್ಟ ಮಕ್ಕಳಿಗೆ ವೃದ್ಧರಿಗೆ ಸಹಾಯ, ಪರಿಸರ ರಕ್ಷಣೆ, ಕೆಟ್ಟ ಹವ್ಯಾಸಗಳಿಂದ ದೂರವಿರುವುದು. ಕೈ ತೊಳೆಯುವ ಸರಿಯಾದ ಕ್ರಮ ಮುಂತಾದ ವಿಷಯಗಳ ಮೇಲೆ ಆಕರ್ಷಕವಾದ ಚಿತ್ರಗಳನ್ನು ಬಿಡಿಸಿ ಘೋಷವಾಕ್ಯಗಳನ್ನು ಬರೆದು ಪ್ರಸ್ತುತ ಪಡೆಸಿದ್ದರು. ಬಿಡಿಸಿದಷ್ಟೇ ಸುಂದರವಾಗಿ ವಿವರಿಸಿದರು. ತದನಂತರದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಲಯನ್ಸ್ ಶಾಲೆ ಮತ್ತು ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾದ ವಿದ್ಯಾರ್ಥಿಗಳು ಕ್ವೆಸ್ಟ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪಾಲಕರಾದ ರಂಜಿತ್ ಹೆಗಡೆ ಮತ್ತು ತನುಜಾ ಹೆಗಡೆ, ಶಿಕ್ಷಕಿಯರಾದ ಅನಿತಾ ಭಟ್ ಮತ್ತು ವೀಣಾ ಭಟ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಲಯನ್ಸ್ ಶಾಲೆಯ ಮಕ್ಕಳು ‘Quest the best’ ಮತ್ತು ಹೆಗಡೆಕಟ್ಟಾ ಶಾಲೆಯ ಮಕ್ಕಳು ‘The Enchanted Pool’, ‘The Swan and the Prince’ ಅನ್ನುವ ಕಿರುನಾಟಕವನ್ನು ಪ್ರದರ್ಶಿಸಿದರು. ಲಯನ್ಸ್ ಶಾಲೆಯ ಮುಖ್ಯಾಧ್ಯಾಪಕ ಶಶಾಂಕ ಹೆಗಡೆಯವರು ಈ ಕಾರ್ಯಕ್ರಮಗಳ ಸಂಯೋಜನೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದರು. ಅತಿಥಿಗಳಾಗಿ ಮತ್ತು ಆಗಮಿಸಿದ ಅರ್ಲ ಬ್ರಿಟೊ, MQC ಡಾ. ನಾಗರಾಜರಾವ್ ಮತ್ತು PMCC ಕೃಷ್ಣಮೂರ್ತಿಯವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. RC ಜ್ಯೋತಿ ಭಟ್, ಕ್ಲಬ್ ಅಧ್ಯಕ್ಷರಾದ ತ್ರಿವಿಕ್ರಮ ಪಟವರ್ಧನ್, ಕ್ವೆಸ್ಟ್ ಛೇರ್‌ಪರ್ಸನ್ ರವಿ ನಾಯಕ, ಖಜಾಂಚಿ ರಾಜಲಕ್ಷ್ಮಿ ಹೆಗಡೆಯವರು ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಕ್ವೆಸ್ಟ್ DC ರಮಾ ಪಟವರ್ಧನರು ವಹಿಸಿದ್ದರು.

300x250 AD
Share This
300x250 AD
300x250 AD
300x250 AD
Back to top