ಶಿರಸಿ: ನಗರದ ಲಯನ್ಸ್ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗೋವಾದ ಪೋಂಡಾದಿಂದ ಆಗಮಿಸಿದ ಲಯನ್ ಸಾಗರ ಸಾಕೋರ್ಡೇಕರರು ವೇದ ಗಣಿತದ ಬಗ್ಗೆ 2 ಘಂಟೆಗಳ ಕಾಲ ಪಾಠ ಮಾಡಿದರು. ಡಿಸ್ಟ್ರಿಕ್ಟ್ ಛೇರ್‌ಪರ್ಸನ್‌ರಾಗಿರುವ ಸಾಗರ್ ನೂರಾರು ತರಗತಿಗಳನ್ನು ಮಾಡಿದ್ದಾರೆ. ಭಾರತದ ಅತ್ಯಂತ ಪ್ರಾಚೀನ ವಿಧಾನವಾದ ಈ ವೇದಗಣಿತದಲ್ಲಿ ಸಂಸ್ಕೃತದಲ್ಲಿರುವ 16 ಸೂತ್ರಗಳನ್ನು ಉಪಯೋಗಿಸಿ ಅತ್ಯಂತ ಸುಲಭವಾಗಿ ಅತೀ ಕಷ್ಟಕರವಾದ ಸಮಸ್ಯೆಗಳನ್ನು ಅತಿ ಶೀಘ್ರದಲ್ಲಿ ಬಿಡಿಸುವ ಪರಿಣಿತಿಯನ್ನು ಇವರಿಂದ ಪಡೆಯಬಹುದಾಗಿದೆ.ತರಗತಿಯ ನಂತರ ಗಣಿತ ಕಷ್ಟ ಅನ್ನುವ ಮಕ್ಕಳೂ, ಉತ್ಸಾಹದಲ್ಲಿ ಗಣಿತವನ್ನು ಆನಂದಿಸಿ ಮುಂದೆ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದರು.