ಕಾರವಾರ: ತುಳಸಿ ಪೂಜೆಯ ಪ್ರಯುಕ್ತ ಗಿಡ್ಡಾ ರೋಡ್ನಲ್ಲಿ ಹಮ್ಮಿಕೊಂಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಸುಷ್ಮಾ ಮಾಳ್ಸೇಕರ (ಪ್ರಥಮ) ಹಾಗೂ ಅಭಿಶೇಕ್ (ದ್ವಿತೀಯ) ಅವರಿಗೆ ಕಲ್ಲೂರು ಟ್ರಸ್ಟ್ನಿಂದ ಬಹುಮಾನ ವಿತರಿಸಲಾಯಿತು.
ಈ ಸ್ಪರ್ಧೆಯಲ್ಲಿ 15 ಜನಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದರು. ಮೊದಲಿಗೆ ಟ್ರಸ್ಟ್ ಅಧ್ಯಕ್ಷ ಇಬ್ರಾಹಿಂ ಕಲ್ಲೂರು ಪ್ರಾಸ್ತಾವಿಕ ಭಾಷಣ ಮಾಡಿ, ಪ್ರತಿಭೆ ಎನ್ನುವುದು ಎಲ್ಲರಲ್ಲೂ ಇರುತ್ತದೆ. ಆ ಪ್ರತಿಭೆಯನ್ನು ಹೊರ ತರಬೇಕೆಂದು ಸ್ಪರ್ಧಿಗಳನ್ನು ಹುರಿದುಂಬಿಸಿ ಎಲ್ಲರನ್ನೂ ಸ್ವಾಗತಿಸಿಕೊಂಡರು.
ಲಯನ್ಸ್ ಕ್ಲಬ್ನ ಅಧ್ಯಕ್ಷೆ ವಿನಯಾ ನಾಯ್ಕ ಮಾತನಾಡಿ, ಕಲೆ ಎನ್ನುವುದು ಎಲ್ಲರಲ್ಲೂ ಇರುತ್ತದೆ ಅದು ಪ್ರತಿಭೆಯ ಮೂಲಕ ಹೊರಬರುತ್ತದೆ ಎಂದು ಸ್ಪರ್ಧೆಗಳಿಗೆ ಅಭಿನಂದಿಸಿದರು.ಲಾ ಮಂಜುನಾಥ ಪವಾರ್ ಮಾತನಾಡಿ ಕಲೆಯ ಬಗ್ಗೆ ಹೇಳಿ ಸ್ಪರ್ಧೆಗಳಿಗೆ ಶುಭ ಹಾರೈಸಿದರು.ಕಾರ್ಯಕ್ರಮವನ್ನು ಎಂ.ಜೆ.ಎಫ್ ಇಬ್ರಾಹಿಂ ಕಲ್ಲೂರ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಲ. ಅಲ್ತಾಫ ಶೇಖ, ಪತ್ರಕರ್ತ ಎಮ್. ಪಿ.ಕಾಮತ್ ಉಪಸ್ಥಿತರಿದ್ದರು.