Slide
Slide
Slide
previous arrow
next arrow

ಅಪರಾಧ ವ್ಯವಹಾರ ನಡೆಸಲು ಜನ ಗೋವಾಕ್ಕೆ ಬರುತ್ತಿದ್ದಾರೆ: ಸಿಎಂ ಪ್ರಮೋದ್ ಸಾವಂತ್

300x250 AD

ಗೋವಾ: ಜನರು ತಮ್ಮ ಅಪರಾಧ ವ್ಯವಹಾರಗಳನ್ನು ನಡೆಸಲು ಇತರ ರಾಜ್ಯಗಳು ಮತ್ತು ದೇಶಗಳಿಂದ ಗೋವಾಕ್ಕೆ ಬರುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದ್ದಾರೆ.
ನವೀಕೃತ ಬೇಟಿಂ ಪೊಲೀಸ್ ಹೊರಠಾಣೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಗೋವಾದಲ್ಲಿ ಅಪರಾಧ ಪ್ರಮಾಣ ತಗ್ಗಿಸಲು ಜನರು ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು. ಗೋವಾ ಪೊಲೀಸರ ದಕ್ಷತೆಯಿಂದಾಗಿ ರಾಜ್ಯವು ಶೇ. 94ರಷ್ಟು ಅಪರಾಧ ಪತ್ತೆ ಪ್ರಮಾಣವನ್ನು ಸಾಧಿಸಿದೆ ಎಂದು ಅವರು ಹೇಳಿದರು.
ದೂರುಗಳ ಆನ್‌ಲೈನ್ ನೋಂದಣಿಗಾಗಿ ಗೋವಾ ಪೊಲೀಸ್ ಮೊಬೈಲ್ ಅಪ್ಲಿಕೇಶನ್ ಅನ್ನು ಒಂದು ತಿಂಗಳೊಳಗೆ ಪ್ರಾರಂಭಿಸಲಾಗುವುದು. ಅಪ್ಲಿಕೇಶನ್ ಮೂಲಕ, ನಾಗರಿಕರು ಗುರುತಿನ ಪುರಾವೆಗಳನ್ನು ಬಳಸಿಕೊಂಡು ತಮ್ಮ ದೂರುಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು. ಗೋವಾ ಪೊಲೀಸರು ಅದರ ಬಗ್ಗೆ ಕ್ರಮ ವಹಿಸುತ್ತಾರೆ ಎಂದು ಅವರು ಹೇಳಿದರು.
ಇದೇ ವೇಳೆ, ಸೈಬರ್ ಕ್ರೈಮ್‌ಗಳು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ ಎಂದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಜಸ್ಪಾಲ್ ಸಿಂಗ್, ತಮ್ಮ ಪೊಲೀಸ್ ಇಲಾಖೆಯು ಸೈಬರ್ ಕ್ರೈಮ್ ಕುರಿತು ಜನಪ್ರತಿನಿಧಿಗಳಿಗೆ ಶಿಕ್ಷಣ ನೀಡುವ ಕಾರ್ಯಕ್ರಮವನ್ನು ರೂಪಿಸಿದೆ ಎಂದು ಹೇಳಿದರು.
20 ಸಾವಿರ ಮಂದಿ ನಿರುದ್ಯೋಗಿಗಳು!
ಗೋವಾದಲ್ಲಿ 1.10 ಲಕ್ಷ ನಿರುದ್ಯೋಗಿ ಯುವಕರು ಇದ್ದಾರೆ ಎಂಬ ನೀತಿ ಆಯೋಗದ ಹೇಳಿಕೆಯನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಮರ್ಥಿಸಿಕೊಂಡಿದ್ದಾರೆ.
ಗೋವಾದ ಸುಮಾರು 80,000 ಮಂದಿ ಈಗಾಗಲೇ ಬೇರೆಡೆ ಉದ್ಯೋಗದಲ್ಲಿದ್ದಾರೆ. ಆದರೆ ರಾಜ್ಯ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಅವರ ಹೆಸರನ್ನು ಕಡಿತಗೊಳಿಸಿಲ್ಲ. ಅವರು ಸರ್ಕಾರಿ ಉದ್ಯೋಗಗಳಿಗಾಗಿ ಕಾಯುತ್ತಿದ್ದಾರೆ. ಆದ್ದರಿಂದ ಅಂತಹ ಉದ್ಯೋಗಿಗಳ ಹೆಸರನ್ನು ಉದ್ಯೋಗ ವಿನಿಮಯ ದಾಖಲೆಯಿಂದ ಸ್ವಯಂಚಾಲಿತವಾಗಿ ರದ್ದುಗೊಳಿಸುವ ವ್ಯವಸ್ಥೆಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ವಾಸ್ತವದಲ್ಲಿ ಕೇವಲ 20,000 ಜನರು ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದರು.

300x250 AD
Share This
300x250 AD
300x250 AD
300x250 AD
Back to top