ಶಿರಸಿ: ಭಾರತ ಸೇವಾದಳ ಸಭಾ ಭವನದಲ್ಲಿ ಎಲ್ಲಾ ಬಗೆಯ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ತಯಾರಿ ಹೇಗಿರಬೇಕು ಎಂಬ ಕುರಿತು ಆಯ್ದ ಸುಮಾರು 150 ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ‘ಅನೇಕ’ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಶಿರಸಿ ಉಪ ವಿಭಾಗಾಧಿಕಾರಿ ದೇವರಾಜ್ ಆರ್. , ಭಾರತ ಸಂವಿಧಾನದ ಪೂರ್ವ ಪೀಠಿಕೆಯನ್ನು ಓದುವ ಮೂಲಕ ಕಾರ್ಯಾಗಾರಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳಿಗೆ ಪ್ರೇರಣಾತ್ಮಕ ಪಾಠವನ್ನು ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಆರ್.ಟಿ.ಓ ಅಧಿಕಾರಿ ಸಿ.ಡಿ.ನಾಯ್ಕ ಮತ್ತು ಕೆನರಾ ಬ್ಯಾಂಕ್ ಮನೋಜ ನಾಯ್ಕ ಇದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಂತೋಷ ಕುಮಾರ್ ಎಚ್. ಸಿಗ್ಗಾ ಸೊರಬ, ಪ್ರಶಾಂತ ಭಟ್ ಶಿರಸಿ, ಎಂ.ಎಚ್.ನಾಯ್ಕ ಶಿರಸಿ, ಪ್ರಸನ್ನ ನಾಯ್ಕ ಹೆಗ್ಗರಣೆ , ಹರೀಶ್ ನಾಯ್ಕ ಶಿರಸಿ, ಗಂಗಾಧರ ನಾಯ್ಕ ಶಿರಸಿ, ಗಣೇಶ ನಾಯ್ಕ ಹೆಗಡೆ ಕುಮಟಾ, ಆಕಾಶ್ ನಾಯ್ಕ ಕಾರವಾರ, ಕಾರ್ತಿಕ ಹೇಮಾದ್ರಿ ಶಿರಸಿ, ನಂದನ ನಾಯ್ಕ, ಹೆಗಡೆ ಕುಮಟಾ ಮತ್ತು ಇತರರು ಹಾಜರಿದ್ದು ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ‘ಅನೇಕ’ ಸಂಸ್ಥೆಯ ಸಂಚಾಲಕ ಉಪನ್ಯಾಸಕ ಉಮೇಶ ನಾಯ್ಕ ಸ್ವಾಗತಿಸಿದರು. ಶಿಕ್ಷಕಿ ಶೀಲಾ ದೇವಾಡಿಗ ನಿರ್ವಹಣೆ ಮಾಡಿದರು.