ಶಿರಸಿ: ಹಳತು ಹೊಸತಿನ ದಾರಿಯಲ್ಲಿ ಸಾಹಿತ್ಯ ಸಾಗುತ್ತಿದೆ. ಹಳಬರು, ಹೊಸಬರು ಸಾಹಿತ್ಯ ಕ್ರಿಯಾಶೀಲತೆ ವಿಶಿಷ್ಟ್ಯತೆ ದಶಕ ಆಗಿದೆ ಎಂದು ಹಿರಿಯ ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಹೇಳಿದರು.
ಸೋಮವಾರ ತಾಲೂಕು ಸಾಹಿತ್ಯ ಪರಿಷತ್ ಘಟಕದ ಆಶ್ರಯದಲ್ಲಿ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನ ಕಾರ್ಯಕ್ರಮದಡಿ ತಾಲೂಕಿನ ದಶಕದೀಚೆಯ ಗದ್ಯ ಪದ್ಯಗಳ ಅವಲೋಕನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪದ್ಯ ಸಾಹಿತ್ಯ ಕುರಿತು ಮಾತನಾಡಿದ ಕವಿ ಗಣೇಶ ಹೊಸ್ಮನೆ ಮಾತನಾಡಿದರು. ಸಮ್ಮಾನ ಸ್ವೀಕರಿಸಿದ ಲೇಖಕಿ ಭಾಗೀರಥಿ ಹೆಗಡೆ ಕಷ್ಟದಲ್ಲಿ ಬರೆದವರೂ ಇದ್ದಾರೆ. ಅಂಥವರ ನಡುವೆ ನನಗೆ ಜಿಲ್ಲಾ ರಾಜ್ಯೋತ್ಸವ ಸಿಕ್ಕಿದ್ದು ಅಚ್ಚರಿ ತಂದಿದೆ ಎಂದರು. ಇನ್ನೋರ್ವ ಸಮ್ಮಾನಿತ ಗುಡ್ಡಪ್ಪ ಜೋಗಿ ಅವರು ಪದ ಹಾಡಿದರು.
ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಜಿ.ಸುಬ್ರಾಯ ಭಟ್ ಬಕ್ಕಳ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಕವಿಗಳು ಸ್ವರಚಿತ ಕವನ ವಾಚಿಸಿದರು.
ಸಾಹಿತ್ಯ ಪರಿಷತ್ ನ ಪದಾಧಿಕಾರಿ ಕೆ. ಎನ್. ಹೊಸ್ಮನಿ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ವಿ.ಆರ್. ಹೆಗಡೆ ನಿರ್ವಹಿಸಿದರು. ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ವಂದಿಸಿದರು.