ಕಾರವಾರ: ಪಶುಸಂಗೋಪನಾ ಇಲಾಖೆಯ 17ನೇಯ 3ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ನ.7ರಿಂದ ಜಿಲ್ಲೆಯಾದ್ಯಂತ ಏಕಕಾಲಕ್ಕೆ 45 ದಿನಗಳ ಹಮ್ಮಿಕೊಳ್ಳಕೊಂಡಿದೆ.
ಈ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 4933 ಬ್ಲಾಕ್ಗಳನ್ನು ರಚಿಸಲಾಗಿದ್ದು, ಪ್ರತಿ ಬ್ಲಾಕನಲ್ಲಿ ಅಂದಾಜು 100 ಜಾನುವಾರುಗಳಂತೆ, 276 ಲಸಿಕಾದಾರನ್ನು ಹೊಂದಿರುವ ಪ್ರತಿ ತಂಡದಲ್ಲಿ ಲಸಿಕಾದಾರರು ಮತ್ತು ಮೇಲ್ವಿಚಾರನ್ನೊಳಗೊಂಡ ಒಟ್ಟು 32 ತಂಡಗಳನ್ನು ರಚಿಸಲಾಗಿದೆ, ಪ್ರತಿ ಲಸಿಕಾದಾರರು ರೈತರ ಮನೆ ಮನೆಗೆ ತೆರಳಿ, ಪ್ರತಿದಿನ ಅಂದಾಜು 50-75 ಜಾನುವಾರುಗಳಿಗೆ ಲಸಿಕೆ ನೀಡಲಾಗುವುದು ಎಂದು ಪಶುಪಾಲನೆ ಮತ್ತು ಪಶುವೈದ್ಯ ಸೇವೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.