ಕಾರವಾರ: ನಗರದಲ್ಲಿ ನ.5ರಂದು ತುಳಸೀ ಹಬ್ಬದ ಪ್ರಯುಕ್ತ ನಗರದ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಹೂ ಹಾಗೂ ಕಬ್ಬುಗಳನ್ನು ವ್ಯಾಪಾರಕ್ಕೆ ದಾಸ್ತಾನು ಮಾಡುವುದರಿಂದ ವಾಹನಗಳ ಸಂಚಾರ ಮತ್ತು ಜನರ ಓಡಾಟಕ್ಕೆ ಅಡಚಣೆ ಆಗುತ್ತದೆ ಹಾಗೂ ವ್ಯಾಪಾರದ ನಂತರ ತ್ಯಾಜ್ಯವನ್ನು ಅಲ್ಲಿಯೇ ಬಿಸಾಡಿ ಹೋಗುವುದರಿಂದ ವಾತಾವರಣ ಕಳುಸಿತಗೊಳ್ಳುತ್ತದೆ. ಹೀಗಾಗಿ ಮಾರುಕಟ್ಟೆಗೆ ಬರುವ ಎಲ್ಲಾ ಹೂ ಹಾಗೂ ಕಬ್ಬು ವ್ಯಾಪಾರಸ್ಥರು ನಗರಸಭೆ ಹಿಂಭಾಗದ ಸರ್ವಿಸ್ ರಸ್ತೆಯಲ್ಲಿ ವ್ಯಾಪಾರ ಮಾಡಬೇಕು ಎಂದು ನಗರ ಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.