ಸಿದ್ದಾಪುರ: ಕನ್ನಡ ನಮ್ಮ ಹೃದಯದ ಭಾಷೆ, ಬೇರೆ ಭಾಷೆಗಳನ್ನೂ ಗೌರವಿಸುವ ಹೃದಯವಂತಿಕೆ ಕನ್ನಡಿಗರದ್ದು ಎಂದು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ.ಹೇಳಿದರು.
ಅವರು ಭುವನಗಿರಿ ಶ್ರೀಭುವನೇಶ್ವರಿ ದೇವಾಲಯದಲ್ಲಿ ಆಯೋಜಿಸಿದ್ದ ಮಾತೃವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾಷೆ ಹೋರಾಟ, ಮಾತುಗಳಿಂದ ಮಾತ್ರ ಬೆಳೆಯುವದಿಲ್ಲ. ಬಳಕೆಯಿಂದ ಬೆಳೆಯುತ್ತದೆ. ಕನ್ನಡ ದೇಶದ ಶ್ರೇಷ್ಠ ಭಾಷೆಗಳಲ್ಲಿ ಒಂದು. ಕನ್ನಡದಲ್ಲಿ ಶ್ರೇಷ್ಠ ಸಾಹಿತ್ಯ ಮೂಡಿದೆ. ನಮ್ಮ ಸಾಹಿತ್ಯ ಪಕ್ಷಾತೀತ, ಜಾತ್ಯಾತೀತವಾಗಿರಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಶುದ್ಧವಾದ ಕನ್ನಡ ಬಳಕೆ ಮಾಡುವದು ಅಗತ್ಯವಾಗಿದೆ. ನಾನೂ ಕೂಡ ಸಾಧ್ಯವಾದಷ್ಟರ ಮಟ್ಟಿಗೆ ಕನ್ನಡದಲ್ಲಿ ತೀರ್ಪನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಈ ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ಎಸ್.ಆರ್.ಹೆಗಡೆ ಹಾರ್ಸಿಮನೆ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶ್ರೀಧರ ಹೆಗಡೆ ಹುಲಿಮನೆ, ವಿಶ್ರಾಂತ ಮುಖ್ಯಾಧ್ಯಾಪಕ, ಸಾಹಿತಿ ಪದ್ಮಾಕರ ಮಡಗಾಂವಕರ, ಸಾಹಿತಿ ಶ್ರೀಪಾದ ಹೆಗಡೆ ಮಗೇಗಾರ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಸೆಚಿತ್ತಾರ ಕಲಾವಿದ ಈಶ್ವರ ನಾಯ್ಕ ಹಸುವಂತೆ, ಅಂತರಾಷ್ಟ್ರೀಯ ಮಟ್ಟದ ಛಾಯಾಚಿತ್ರಗ್ರಾಹಕ ನಾಗೇಂದ್ರ ಮುತ್ಮುರ್ಡು ಅವರನ್ನು ಸನ್ಮಾನಿಸಲಾಯಿತು. ತುಷಾರ ಶಾನಭಾಗ, ಕುಮಾರ ಎಸ್,ಭಟ್ಟ, ಮೀನಾಕ್ಷಿ ಗೌಡ, ರಜತ ಹೆಗಡೆ, ಪವಿತ್ರಾ ಕಾಮತ್, ಭೂಮಿಕಾ ಹೆಗಡೆ, ಚಿರಾಗ ಮಹಾಲೆ, ಭಾರ್ಗವ ಜಿ.ವಿ., ರಿಷಬ್ ನಾಯಕ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶಿಕ್ಷಣಾಭಿಮಾನಿ ಆರ್.ಎಸ್.ಹೆಗಡೆ ಶಿರಸಿ ಉಪಸ್ಥಿತರಿದ್ದರು. ಭುವನೇಶ್ವರಿ ದೇವಾಲಯ ಆಡಳಿತ ಕಮಿಟಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಅಧ್ಯಕ್ಷತೆವಹಿಸಿದ್ದರು. ಮಾತೃವಂದನಾ ಸಮಿತಿ ಕಾರ್ಯಾಧ್ಯಕ್ಷ ಕೆಕ್ಕಾರ ನಾಗರಾಜ ಭಟ್ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಕಾಂತ ಹೆಗಡೆ ಗುಂಜಗೋಡ ಸ್ವಾಗತಿಸಿದರು. ನಾಗವೇಣಿ ಭಟ್ ಮುತ್ತಿಗೆ ಹಾಗೂ ಸಂಗಡಿಗರು ಕನ್ನಡ ಗೀತೆ ಹಾಡಿದರು.ಗಣಪತಿ ಹೆಗಡೆ ಗುಂಜಗೋಡ ನಿರೂಪಿಸಿದರು.