ಶಿರಸಿ: ಕನ್ನಡ ರಾಜ್ಯೋತ್ಸವದ ಹಿನ್ನಲೆಯಲ್ಲಿ ಕಾನಸೂರಿನ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ಸ್ನೇಹಿತರ ಬಳಗ ಕಾನಸೂರು, ಕರ್ನಾಟಕ ರಕ್ಷಣಾ ವೇದಿಕೆಯ ಗಜಸೇನೆ ಶಿರಸಿ -ಸಿದ್ದಾಪುರ ಅವರ ಆಶ್ರಯದಲ್ಲಿ ಎರಡನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನ.1 ರಂದು ಸಂಜೆ 6 ರಿಂದ ನಡೆಯಲಿದೆ.
ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಸಂಭ್ರಮ ಹಾಗೂ 7.30 ರಿಂದ ಕಾನಸೂರಿನಲ್ಲಿ ಪ್ರಥಮ ಬಾರಿಗೆ ಪ್ರೋ.ಎಂ.ಎ.ಹೆಗಡೆ ವಿರಚಿತ ಶ್ರೀಕೃಷ್ಣಂ ವಂದೇ ಯಕ್ಷನೃತ್ಯ ರೂಪಕ ಪ್ರದರ್ಶನವಾಗಲಿದೆ. ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕವು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಹಮ್ಮಿಕೊಂಡ ಈ ರೂಪಕದ ಮುಮ್ಮೇಳದಲ್ಲಿ ಇಂಡಿಯಾ ಬುಕ್ ನಲ್ಲಿ ಹೆಸರು ದಾಖಲಿಸಿದ ಕು. ತುಳಸಿ ಹೆಗಡೆ ಕೃಷ್ಣನ ಕಥಾನಕ ಬಿಚ್ಚಿಟ್ಟರೆ, ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಶರತ್ ಜಾನಕೈ, ಪ್ರಮೋದ ಕಬ್ಬಿನಗದ್ದೆ, ವೆಂಕಟೇಶ ಬೊಗ್ರಿಮಕ್ಕಿ ಹಿನ್ನಲೆಯಲ್ಲಿ ಸಹಕಾರ ನೀಡಲಿದ್ದಾರೆ.
8.30ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸ್ಕಾಡವೇಸ್ ಸಂಸ್ಥೆ ಮುಖ್ಯಸ್ಥ ಡಾ. ವೆಂಕಟೇಶ ನಾಯ್ಕ ಉದ್ಘಾಟಿಸಲಿದ್ದಾರೆ. ಗ್ರಾ.ಪಂ.ಅಧ್ಯಕ್ಷ ವೀರಭದ್ರ ಜಂಗಣ್ಣನವರ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ.
ಶಿರಸಿ ತಾಲೂಕು ವೈದ್ಯಾಧಿಕಾರಿ ಡಾ. ವಿನಾಯಕ ಭಟ್ಟ ಕಣ್ಣಿ ಹಾಗೂ ಸಾಹಸಿ ಬಾಲಕಿ ಕೌಸಲ್ಯ ವೆಂಕಟರಮಣ ಹೆಗಡೆ ಮಾದನಕಳ್ ಅವರನ್ನು ಉದ್ಯಮಿ ಆರ್.ಜಿ.ಶೇಟ್ ಸಮ್ಮಾನ ಮಾಡಲಿದ್ದಾರೆ.
ಅತಿಥಿಗಳಾಗಿ ಗಜಸೇನೆ ಜಿಲ್ಲಾ ಘಟಕ ಅಧ್ಯಕ್ಷ ಉಮೇಶ ಹರಿಕಂತ್ರ, ತಾಲೂಕಾ ಗಜಸೇನೆ ಅಧ್ಯಕ್ಷ ರವಿಕುಮಾರ ಗ್ರಾ.ಪಂ.ಉಪಾಧ್ಯಕ್ಷೆ ಶಶಿಪ್ರಭಾ ಹೆಗಡೆ, ಸದಸ್ಯರಾದ ಶಶಿಕಾಂತ ನಾಮಧಾರಿ, ಮನೋಜ ಶಾನಭಾಗ, ಸವಿತಾ ಕಾನಡೆ, ಎಸ್.ಡಿ.ಎಂ.ಸಿ ಅಧ್ಯಕ್ಷ ರಾಘವೇಂದ್ರ ನಾಯ್ಕ ಪಾಲ್ಗೊಳ್ಳಲಿದ್ದಾರೆ. ಬಳಿಕ ಕದಂಬ ಕಲಾ ವೇದಿಕೆಯ ಶಿರಸಿ ರತ್ನಾಕರ ತಂಡದಿಂದ ರಸಮಂಜರಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ಸಂಘಟಕ ರಾಜು ಕಾನಸೂರು ತಿಳಸಿದ್ದಾರೆ.