ಲೇಹ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೇಹ್‌ನಲ್ಲಿರುವ ದೇಶದ ಕೊನೆಯ ಹಳ್ಳಿಯಾದ ಶ್ಯೋಕ್‌ನಿಂದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO)ನ 75 ವಿವಿಧ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು.
ಯೋಜನೆಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅರುಣಾಚಲ ಪ್ರದೇಶ, ಸಿಕ್ಕಿಂ ಮತ್ತು ರಾಜಸ್ಥಾನ ಸೇರಿದಂತೆ ಅಂತರಾಷ್ಟ್ರೀಯ ಗಡಿಗಳನ್ನು ಹೊಂದಿರುವ ರಾಜ್ಯಗಳನ್ನು ಒಳಗೊಂಡ 45 ಸೇತುವೆಗಳು, 27 ರಸ್ತೆಗಳು ಮತ್ತುಎರಡು ಹೆಲಿಪ್ಯಾಡ್‌ಗಳನ್ನು ಹೊಂದಿದೆ. ರಕ್ಷಣಾ ಸಚಿವರು ಲಡಾಖ್‌ನಲ್ಲಿ ಕಾರ್ಬನ್ ನ್ಯೂಟ್ರಲ್ ವಸತಿ ಸಂಕೀರ್ಣ ಮತ್ತು ಎರಡು ಹೆಲಿಪ್ಯಾಡ್‌ಗಳನ್ನು ಉದ್ಘಾಟಿಸಿದ್ದಾರೆ.
ಕೊನೆಯ ಮೈಲಿ ಸಂಪರ್ಕವನ್ನು ಒದಗಿಸುವಲ್ಲಿ ಮತ್ತು ಗಡಿಯಲ್ಲಿರುವ ರಾಜ್ಯಗಳು ಮತ್ತು ಸಶಸ್ತ್ರ ಪಡೆಗಳಿಗೆ ಕಾರ್ಯತಂತ್ರದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ರಕ್ಷಣಾ ಸಚಿವರು ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಅನ್ನು ಶ್ಲಾಘಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಪ್ರತಿ ಗ್ರಾಮಕ್ಕೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಜೀವನಮಟ್ಟವನ್ನು ಉನ್ನತೀಕರಿಸಲು ಆದ್ಯತೆ ನೀಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಿಗಳ ಉಪಸ್ಥಿತಿಯಿಂದಾಗಿ ಇಲ್ಲಿ ಅಭಿವೃದ್ಧಿ ಕುಂಠಿತವಾಗಿತ್ತು, ಈ ಕೇಂದ್ರಾಡಳಿತ ಪ್ರದೇಶಗಳು ಈಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ ಎಂದರು.
ವರದಿಗಳ ಪ್ರಕಾರ, 120 ಮೀಟರ್ ಶ್ಯೋಕ್ ಸೇತುವೆಯು ಹಿಂದಿನ 20 ಮೀಟರ್ ಬೈಲಿ ಸೇತುವೆಯನ್ನು ಹನ್ನೆರಡು ಸಾವಿರ ಅಡಿಗಳಷ್ಟು ಎತ್ತರದಲ್ಲಿ ಡರ್ಬುಕ್ – ಶ್ಯೋಕ್ ಗ್ರಾಮವನ್ನು ದೌಲತ್ ಬೇಗ್ ಓಲ್ಡಿ, DSDBO ನೊಂದಿಗೆ ಸಂಪರ್ಕಿಸುತ್ತದೆ. ಸವಾಲಿನ ಹವಾಮಾನ ಮತ್ತು ಅನಪೇಕ್ಷಿತ ಪರಿಸ್ಥಿತಿಗಳಲ್ಲಿ, ಸೇತುವೆಯನ್ನು ಹನ್ನೆರಡು ತಿಂಗಳ ದಾಖಲೆ ಸಮಯದಲ್ಲಿ ಪೂರ್ಣಗೊಳಿಸಲಾಗಿದೆ.