ಶಿರಸಿ: ತಾಲೂಕಿನ ರೈತರಿಗೆ ವಿಮಾ ಕಂಪನಿಯಿಂದ ಪ್ರತಿ ವರ್ಷವೂ ಅನ್ಯಾಯವಾಗುತ್ತಿದೆ. ಎಕರೆಗೆ 2500 ಪ್ರೀಮಿಯಂ ತುಂಬಿಸಿಕೊಂಡು ಶಿರಸಿ ತಾಲೂಕಿನ ಪೂರ್ವ ಭಾಗದ ರೈತರಿಗೆ ಎಕರೆಗೆ 400 ರಿಂದ 500 ರೂಪಾಯಿಗಳು ಜಮಾ ಆಗಿರುವುದು ಅತ್ಯಂತ ದುರಾದೃಷ್ಟಕರ. ಕಂಪನಿಯು ಈಗಾಗಲೇ ಹಾಕಿದ ಹಣವನ್ನು ಹಿಂತಿರುಗಿಸಿಕೊಂಡು ರೈತರಿಗೆ ಸಲ್ಲಬೇಕಾದ ನ್ಯಾಯಯುತವಾದ ಮೊತ್ತವನ್ನು ಬರಿಸಬೇಕು. ಇಲ್ಲವಾದರೇ ರೈತರನ್ನು ಒಗ್ಗೂಡಿಸಿಕೊಂಡು ವಿಮಾ ಕಂಪನಿ ವಿರುದ್ಧ ಹೋರಾಟ ಅನಿವಾರ್ಯ. ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕು. ಈಗಾಗಲೇ ಕಾರ್ಮಿಕ ಇಲಾಖೆಯ ಸಚಿವರಿಗೂ ಈ ವಿಷಯವನ್ನು ಗಮನಕ್ಕೆ ತಂದಿದ್ದು ಅವರು ಕೂಡ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಕಾಳಂಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದ್ಯಾಮಣ್ಣ ದೊಡ್ಡಮನಿ ಹಾಗೂ ಶಿರಸಿ ಎಪಿಎಂಸಿ ಅಧ್ಯಕ್ಷರಾದ ಪ್ರಶಾಂತ್ ಗೌಡ್ರು ಸಂತೊಳ್ಳಿ ಜಂಟಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ.