ಅಹ್ಮದಾಬಾದ್: ಗುಜರಾತ್ ಅನ್ನು ಶೇ.100ರಷ್ಟು ‘ಹರ್ ಘರ್ ಜಲ್’ ರಾಜ್ಯವೆಂದು ಘೋಷಿಸಲಾಗಿದೆ. ಇದರರ್ಥ ಅಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಮನೆಗಳಿಗೆ ನಲ್ಲಿಗಳ ಮೂಲಕ ಸುರಕ್ಷಿತ ಕುಡಿಯುವ ನೀರು ಲಭ್ಯವಾಗಿದೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ರಾಜ್ಯದ ಎಲ್ಲಾ 91,73,378 ಮನೆಗಳು ಈಗ ನೀರಿನ ಸಂಪರ್ಕವನ್ನು ಹೊಂದಿವೆ.
ಗುಜರಾತ್ ರಾಜ್ಯವನ್ನು 100 ಪ್ರತಿಶತ ‘ಹರ್ ಘರ್ ಜಲ್’ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಅನ್ನು ಶ್ಲಾಘಿಸಿದ್ದಾರೆ.
ಹರ್ ಘರ್ ಜಲ್ 100 ಪ್ರತಿಶತ ಪೂರ್ಣಗೊಂಡಿರುವ ಕುರಿತು ಗುಜರಾತ್ ಸಚಿವ ಋಷಿಕೇಶ್ ಪಟೇಲ್ ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮೋದಿ, ರಾಜ್ಯದ ಜನರ ಉತ್ಸಾಹವನ್ನು ಶ್ಲಾಘಿಸಿದ್ದಾರೆ. ಇದು ಜಲ ಶಕ್ತಿಯ ಬಗ್ಗೆ ಜನರಲ್ಲಿರುವ ಉತ್ಸಾಹವನ್ನು ತೋರಿಸುತ್ತದೆ ಎಂದು ಹೇಳಿದರು.
ಟ್ವಿಟ್ ಮಾಡಿರುವ ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಅವರು, ಇದು ಗುಜರಾತಿ ಹೊಸ ವರ್ಷದ ಸಂದರ್ಭದಲ್ಲಿ ಮತ್ತೊಂದು ಸಾಧನೆ ಎಂದು ಕರೆದಿದ್ದಾರೆ. ಹರಿಯಾಣ ಮತ್ತು ತೆಲಂಗಾಣ ನಂತರ ಗುಜರಾತ್ ಈಗ ಈ ಸಾಧನೆ ಮಾಡಿದ ಮೂರನೇ ದೊಡ್ಡ ರಾಜ್ಯವಾಗಿದೆ ಎಂದಿದ್ದಾರೆ.
ಕೃಪೆ : http://news13.in