Slide
Slide
Slide
previous arrow
next arrow

ಅಯೋಧ್ಯೆಯಲ್ಲಿನ ರಾಮ ಮಂದಿರದ ಶೇ.50ರಷ್ಟು ಕಾಮಗಾರಿ ಪೂರ್ಣ

300x250 AD

ನವದೆಹಲಿ: ಅಯೋಧ್ಯೆಯಲ್ಲಿನ ಭವ್ಯವಾದ ರಾಮ ಮಂದಿರವನ್ನು 2024ರ ಜನವರಿಯಲ್ಲಿ ದೇವರ ವಿಗ್ರಹಗಳನ್ನು ಸ್ಥಾಪಿಸಿದ ನಂತರ ಭಕ್ತರ ಪ್ರವೇಶಕ್ಕಾಗಿ ತೆರೆಯಲಾಗುವುದು ಎಂದು ಅದರ ನಿರ್ಮಾಣದ  ಮೇಲ್ವಿಚಾರಣೆಗಾಗಿ ಸ್ಥಾಪಿಸಲಾದ ಟ್ರಸ್ಟ್‌ನ ಪ್ರಮುಖ ಸದಸ್ಯ ತಿಳಿಸಿದ್ದಾರೆ.

ಶೇ.50 ರಷ್ಟು ದೇಗುಲ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಒಟ್ಟಾರೆ ಪ್ರಗತಿ ತೃಪ್ತಿಕರವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.

“ಮಕರ ಸಂಕ್ರಾಂತಿ ಹಬ್ಬದಂದು ದೇಗುಲದ ಗರ್ಭಗುಡಿಯಲ್ಲಿ ರಾಮ ಲಲ್ಲಾನ ವಿಗ್ರಹಗಳನ್ನು ಪ್ರತಿಷ್ಠಾಪಿಸಿದ ನಂತರ 2024 ರ ಜನವರಿಯಲ್ಲಿ ದೇವಾಲಯವನ್ನು ಭಕ್ತರಿಗೆ ತೆರೆಯಲಾಗುವುದು” ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು  ತಿಳಿಸಿದ್ದಾರೆ. ಮುಂದಿನ ವರ್ಷ ಡಿಸೆಂಬರ್ ವೇಳೆಗೆ ದೇಗುಲ ಸಿದ್ಧವಾಗಲಿದೆ ಮತ್ತು ಜನವರಿ 14, 2024 ರ ಸುಮಾರಿಗೆ ಶ್ರೀರಾಮನ ವಿಗ್ರಹಗಳನ್ನು ಸ್ಥಾಪಿಸಲಾಗುವುದು ಎಂದಿದ್ದಾರೆ.

“ರಾಮ ಮಂದಿರವನ್ನು ನಿರ್ಮಿಸಲು ಅಂದಾಜು 1,800 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು” ಎಂದು ರಾಯ್ ಹೇಳಿದ್ದಾರೆ.

ಭಾನುವಾರ ದೇವಸ್ಥಾನ ನಿರ್ಮಾಣ ಕಾಮಗಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಪರಿಶೀಲಿಸಿದ್ದಾರೆ.

300x250 AD

ಆಗಸ್ಟ್ 5, 2020 ರಂದು ಪ್ರಧಾನಿಯವರು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ನವೆಂಬರ್ 9, 2019 ರ ಸುಪ್ರೀಂ ಕೋರ್ಟ್ ತೀರ್ಪು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತ್ತು.

ಯೋಜನೆಯ ಪ್ರಕಾರ, ರಾಮಮಂದಿರದ ಸುತ್ತಮುತ್ತಲಿನ 70 ಎಕರೆ ಪ್ರದೇಶದಲ್ಲಿ ವಾಲ್ಮೀಕಿ, ಕೇವತ್, ಶಬರಿ, ಜಟಾಯು, ಸೀತಾ, ವಿಘ್ನೇಶ್ವರ (ಗಣೇಶ) ಮತ್ತು ಶೇಷಾವತಾರ (ಲಕ್ಷ್ಮಣ) ದೇವಾಲಯಗಳನ್ನು ಸಹ ನಿರ್ಮಿಸಲಾಗುತ್ತದೆ. ದೇವಾಲಯದ ವಿಸ್ತೀರ್ಣ ಮತ್ತು ಅದರ ಪ್ರಾಂಗಣ ಸೇರಿದಂತೆ ಒಟ್ಟು ಎಂಟು ಎಕರೆ ಜಾಗವನ್ನು ಸುತ್ತುವರಿದು ಆಯತಾಕಾರದ ಎರಡು ಅಂತಸ್ತಿನ ‘ಪರಿಕ್ರಮ’ ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಅದರ ಪೂರ್ವ ಭಾಗದಲ್ಲಿ ಮರಳುಗಲ್ಲಿನಿಂದ ಮಾಡಿದ ಪ್ರವೇಶ ದ್ವಾರವಿರುತ್ತದೆ.

ದೇವಾಲಯದ ಗರ್ಭಗುಡಿಯೊಳಗೆ ರಾಜಸ್ಥಾನದ ಮಕ್ರಾನಾ ಬೆಟ್ಟಗಳ ಬಿಳಿ ಅಮೃತಶಿಲೆಯನ್ನು ಬಳಸಲಾಗುತ್ತಿದೆ.

ಕೃಪೆ:http://-news13.in

Share This
300x250 AD
300x250 AD
300x250 AD
Back to top